ಜೆಮ್ಶೆಡ್ಪುರ(ಜಾರ್ಖಂಡ್): ಜಾರ್ಖಂಡ್ನಲ್ಲಿ ಭಾರಿ ಮಳೆ ಸುರಿದು ಪ್ರವಾಹ ಉಂಟಾದ ಪರಿಣಾಮ, ಪೂರ್ವ ಸಿಂಗಭೂಮ್ ಜಿಲ್ಲೆಯ ಖಾಸಗಿ ವಸತಿ ಶಾಲೆಯೊಂದರಲ್ಲಿ ಸಿಲುಕಿದ್ದ 162 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ಧಾರೆ.

‘ಪ್ರವಾಹದಿಂದಾಗಿ, ಕೌವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಪಂಡರ್ಸೋಲಿ ಎಂಬಲ್ಲಿನ ಲವಕುಶ ವಸತಿ ಶಾಲೆಯು ಭಾಗಶಃ ಮುಳುಗಿ, ವಿದ್ಯಾರ್ಥಿಗಳು ಸಿಲುಕಿದ್ದರು. ಶಿಕ್ಷಕರು ಎಲ್ಲ ವಿದ್ಯಾರ್ಥಿಗಳನ್ನು ಶಾಲೆಯ ಚಾವಣಿಗೆ ಸ್ಥಳಾಂತರಿಸಿದ್ದರು. ರಾತ್ರಿಯಿಡೀ ಅವರು ಚಾವಣಿಯಲ್ಲಿ ಇದ್ದರು’ ಎಂದು ತಿಳಿಸಿದ್ದಾರೆ.

‘ಈ ಕುರಿತು ಭಾನುವಾರ ಬೆಳಿಗ್ಗೆ 5.30ಕ್ಕೆ ಮಾಹಿತಿ ಲಭಿಸಿದ ತಕ್ಷಣ, ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ತೆರಳಿದರು. ಗ್ರಾಮಸ್ಥರ ನೆರವಿನಿಂದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಗ್ರಾಮೀಣ) ರಿಷಭ ಗರ್ಗ್ ಹೇಳಿದ್ದಾರೆ.
.ಉತ್ತರಾಖಂಡ: ಹಿಮಪಾತದಲ್ಲಿ ಸಿಲುಕಿದ 25 ಬಿಆರ್ಒ ಕಾರ್ಮಿಕರು.ಉತ್ತರಾಖಂಡ | ಅಲಕಾನಂದ ನದಿಗೆ ಉರುಳಿದ ಬಸ್: 40 KM ದೂರದಲ್ಲಿ ಮಹಿಳೆ ಶವ ಪತ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.