ಮುಂಬೈ: ಇಲ್ಲಿನ ಜೆಜೆ ಆಸ್ಪತ್ರೆಯ ವೈದ್ಯರೊಬ್ಬರು ಸೋಮವಾರ ರಾತ್ರಿ ‘ಅಟಲ್ ಸೇತು’ನಿಂದ ಸಮುದ್ರಕ್ಕೆ ಜಿಗಿದಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಮುಂಬೈ ಪ್ರದೇಶವನ್ನು ನವಿ ಮುಂಬೈನ ನವ–ಶೇವಾ ಪ್ರದೇಶದ ಜೊತೆ ಸಂಪರ್ಕಿಸುವ ಈ ಸೇತುವೆಯು ಭಾರತದ ಅತಿ ಉದ್ದದ ಸಮುದ್ರ ಸೇತುವೆ. ಇದು ದೇಶದಲ್ಲಿ ಸಮುದ್ರದ ಮೇಲೆ ಸಾಗುವ ಅತಿ ಉದ್ದದ ಸೇತುವೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.

ಸಮುದ್ರಕ್ಕೆ ಹಾರಿದ ವೈದ್ಯರನ್ನು ಡಾ. ಓಂಕಾರ್ ಭಗವಾನ್ ಕವಿಟ್ಕೆ (32) ಎಂದು ಹೇಳಲಾಗಿದೆ. ಸೋಮವಾರ ರಾತ್ರಿ 9.45ರ ಸುಮಾರಿಗೆ ಅಟಲ್ ಸೇತು ನಿಯಂತ್ರಣಾ ಕೊಠಡಿಗೆ ನವಿ ಮುಂಬೈ ಪೊಲೀಸರು ಮಾಹಿತಿ ತಿಳಿಸಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ನಾಪತ್ತೆಯಾದ ವೈದ್ಯನಿಗಾಗಿ ಶೋಧ ಆರಂಭಿಸಿದ್ದರು. ಕಳೆದ 12 ಗಂಟೆಯಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೇತುವೆಯ ಮೇಲೆ ವೈದ್ಯನ ಕಾರು ಮತ್ತು ಮೊಬೈಲ್ ದೊರಕಿದೆ. ಸಿಸಿಟಿವಿ ದೃಶ್ಯದಿಂದ ವ್ಯಕ್ತಿಯನ್ನು ಜೆಜೆ ಆಸ್ಪತ್ರೆಯ ವೈದ್ಯ ಎಂದು ಗುರುತು ಪತ್ತೆ ಮಾಡಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.