ಗುವಾಹಟಿ: ಧೇಮಾಜಿ ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆಯ ವರದಿ ಮಾಡುತ್ತಿದ್ದಾಗ ಗುಂಪೊಂದು ಪತ್ರಕರ್ತರೊಬ್ಬರ ಮೇಲೆ ದಾಳಿ ನಡೆಸಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಅವರು ದಿಬ್ರುಗಢದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಸ್ಸಾಮಿ ಸುದ್ದಿ ಮಾಧ್ಯಮದಲ್ಲಿ ಪತ್ರಕರ್ತರಾಗಿರುವ ಮಧುರ್ಜ್ಯ ಸೈಕಿಯಾ ಗಾಯಗೊಂಡವರು. ಶುಕ್ರವಾರ ದಿಮೋವ್ ಪಠಾರ್ನಲ್ಲಿ ವರದಿ ಮಾಡುತ್ತಿದ್ದಾಗ ಸುಮಾರು 25 ಜನರ ಗುಂಪು ದೊಣ್ಣೆಗಳಿಂದ ದಾಳಿ ನಡೆಸಿತ್ತು ಎಂದು ಅವರು ಹೇಳಿದ್ದಾರೆ. ಸ್ಥಳೀಯ ಸಂಘಟನೆಗಳ ನಾಯಕರು ಈ ದಾಳಿಯ ಹಿಂದೆ ಇದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ, ‘ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಬಂಧಿಸುವುದು ಪೊಲೀಸರ ಕರ್ತವ್ಯ’ ಎಂದು ಹೇಳಿದ್ದಾರೆ.

ಕಳೆದ ವಾರದೊಳಗೆ ರಾಜ್ಯದ ಪತ್ರಕರ್ತರ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ. ಜೂನ್ 29 ರಂದು ಧೇಕಿಯಾಜುಲಿಯಲ್ಲಿ ಸ್ಥಳೀಯ ಟಿವಿ ಪತ್ರಕರ್ತೆ ಬಿಮಲ್ಜ್ಯೂತಿ ನಾಥ್ ಮತ್ತು ಅವರ ಸಹೋದ್ಯೋಗಿಯ ಮೇಲೆ ಹಲ್ಲೆ ನಡೆಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.