ಚೆನ್ನೈ: ಭಾರತೀಯ ಸೇನೆಯ ಮೊದಲ ಮುಖ್ಯಸ್ಥ, ಕೊಡಗಿನ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ ಪ್ರತಿಮೆಯನ್ನು ಚೆನ್ನೈನಲ್ಲಿರುವ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಶನಿವಾರ ಅನಾವರಣ ಮಾಡಲಾಯಿತು.

ವಾಯುಪಡೆಯಲ್ಲಿ ಉನ್ನತ ಅಧಿಕಾರಿಯೂ ಆಗಿದ್ದ ಪುತ್ರ ಕೆ.ಸಿ.ಕಾರ್ಯಪ್ಪ ಅವರು ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಮೇಜರ್ ಜನರಲ್ ಟಿ.ಕೆ ಕೌಲ್ ಹಾಗೂ ವಿ.ಡಿ.ಚೌಗಲೆ ಪಾಲ್ಗೊಂಡಿದ್ದರು.

ಹಿಂದೆ ಇಲ್ಲಿ ತರಬೇತಿ ಪಡೆದವರು ಅಕಾಡೆಮಿಯ ಸುವರ್ಣಮಹೋತ್ಸವದ ಅಂಗವಾಗಿ ಈ ಪ್ರತಿಮೆಯನ್ನು ದಾನವಾಗಿ ನೀಡಿದ್ದಾರೆ.

ಕಾರ್ಯಪ್ಪ ಅವರು ಕರ್ನಾಟಕದ ಮಡಿಕೇರಿಯವರು. 1947ರಲ್ಲಿ ಪಾಕಿಸ್ತಾನದೊಂದಿಗೆ ಭಾರತ ಯುದ್ಧ ಆರಂಭಿಸಿದಾಗ ಇವರನ್ನು ಪಶ್ಚಿಮ ಸೈನ್ಯದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಭಾರತದ ಸೇನೆಯ ಅಧಿಕಾರಿಗಳಲ್ಲಿ ಫೀಲ್ಡ್ ಮಾರ್ಷಲ್ ಗೌರವಕ್ಕೆ ಪಾತ್ರರಾದ ಇಬ್ಬರಲ್ಲಿ ಕಾರ್ಯಪ್ಪ ಸಹ ಒಬ್ಬರು.

ಸಮಾರಂಭದಲ್ಲಿ ಮಾತನಾಡಿದ ಕೆ.ಸಿ ಕಾರ್ಯಪ್ಪ ಅವರು, ನನ್ನ ತಂದೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಬಗ್ಗೆ ಬಹಳ ಗೌರವ ಹೊಂದಿದ್ದರು. ಅವರು ಭಾರತೀಯ ಸೈನ್ಯದ ದಂಡನಾಯಕರಾದ ಬಳಿಕ ನಮ್ಮನ್ನು ರಾಜ್‌ಘಾಟ್‌ಗೆ ಕರೆದೊಯ್ಯಿದಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.