ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಇಆರ್‌ಟಿ ಕೈಬಿಟ್ಟಿರುವ ವಿಷಯಗಳನ್ನು ಪಠ್ಯದಲ್ಲಿ ಸೇರ್ಪಡೆ: ಕೇರಳ ಸರ್ಕಾರ

Published 11 ಸೆಪ್ಟೆಂಬರ್ 2023, 6:17 IST
Last Updated 11 ಸೆಪ್ಟೆಂಬರ್ 2023, 6:17 IST
ಅಕ್ಷರ ಗಾತ್ರ

ತಿರುವನಂತಪುರಂ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಕೈಬಿಟ್ಟಿರುವ ವಿಷಯಗಳನ್ನು ಶಾಲಾ ‍ಪಠ್ಯದಲ್ಲಿ ಅಳವಡಿಸಿರುವುದಾಗಿ ಕೇರಳ ಸರ್ಕಾರ ಸೋಮವಾರ ಹೇಳಿದೆ.

ರಾಜ್ಯಕ್ಕೆ ಅನುಕರಣೀಯ ಶೈಕ್ಷಣಿಕ ಹಿನ್ನೆಲೆ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಹೇಳಿದ್ದಾರೆ.

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ–2023ರನ್ನು ಅಳವಡಿಸುವುದರ ಬಗ್ಗೆ ವಿರೋಧ ಪಕ್ಷ ಯುಡಿಎಫ್‌ ಎತ್ತಿದ ಪ್ರಶ್ನೆಗೆ ಅವರು ವಿಧಾನಸಭೆಯಲ್ಲಿ ಉತ್ತರಿಸಿದರು.

‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿ ಸಂಪೂರ್ಣವಾಗಿ ಅಳವಡಿಸಿಲ್ಲ. ತಮಿಳುನಾಡು ತಿರಸ್ಕರಿಸಿದೆ. ಕರ್ನಾಟಕ ಕೆಲ ಭಾಗವನ್ನಷ್ಟೇ ಒಪ್ಪಿಕೊಂಡಿದೆ’ ಎಂದು ಅವರು ಹೇಳಿದರು.

‘ಹೆಚ್ಚಾಗಿ, ಎನ್‌ಸಿಇಆರ್‌ಟಿ ಮಹಾತ್ಮಾ ಗಾಂಧಿ ಅವರ ಕೊಲೆಯಲ್ಲಿ ಆರ್‌ಎಸ್‌ಎಸ್‌ ಪಾತ್ರದ ಆರೋಪ ಇರುವುದರಿಂದ ಆ ವಿಷಯ ಸೇರಿ, ಭಾರತದಲ್ಲಿ ಮೊಘಲ್‌ ಆಳ್ವಿಕೆ, ಭಾರತದ ಸ್ವಾತಂತ್ರ್ಯ ಹೋರಾಟದ ಮತ್ತು ಕೆಲವು ಕೋಮುಗಲಭೆಗಳನ್ನು 11 ಹಾಗೂ 12ನೇ ತರಗತಿಗಳ ಪಠ್ಯದಿಂದ ಕೈ ಬಿಟ್ಟಿತ್ತು’ ಎಂದು ಅವರು ಹೇಳಿದ್ದಾರೆ.

‘ಹೀಗಾಗಿ ಎನ್‌ಸಿಇಆರ್‌ಟಿ ಕೈಬಿಟ್ಟಿರುವ ಭಾಗಗಳನ್ನು ನಾವು ಹೊಸ ಪಠ್ಯದಲ್ಲಿ ಸೇರಿಸಿದ್ದೇವೆ. ಇದು ಕೇವಲ ಪಠ್ಯಪುಸ್ತಕವಲ್ಲ. ವಿದ್ಯಾರ್ಥಿಗಳು ಅಧ್ಯಯನ ಮಾಡಲು ಮತ್ತು ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದಾದ ಪಠ್ಯಕ್ರಮವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಇದೇ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಕೇರಳ ಮುಖ್ಯಮಂತ್ರಿ ಪೂರಕ ಪಠ್ಯಪುಸ್ತಕ ಬಿಡುಗಡೆ ಮಾಡಿದ್ದರು. ಆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT