ನವದೆಹಲಿ: ಸಾರ್ವಜನಿಕ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯವರ ಬಗ್ಗೆ ಹೇಳಿಕೆಗಳನ್ನು ನೀಡಿರುವುದು ಅಸಹ್ಯಕರ ಮತ್ತು ಅವಮಾನಕರ ಎಂದು ಅಮಿತ್ ಶಾ ಕಿಡಿಕಾರಿದ್ದಾರೆ.
ತಮ್ಮ ವೈಯಕ್ತಿಕ ಆರೋಗ್ಯ ವಿಷಯಗಳಿಗೆ ಅನಗತ್ಯವಾಗಿ ಪ್ರಧಾನಿಯವರನ್ನು ಎಳೆತಂದ ಖರ್ಗೆ ಅವರು, ಪ್ರಧಾನಿ ಹುದ್ದೆಯಿಂದ ಮೋದಿಯವರನ್ನು ಇಳಿಸುವವರೆಗೂ ಸಾಯುವುದಿಲ್ಲ ಎಂದು ಹೇಳಿದ್ದಾರೆ. ಇದು ಕೆಟ್ಟ ಹಗೆತನದ ಪ್ರದರ್ಶನ ಎಂದು ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಜಮ್ಮುವಿನ ಜಸರೋಠಾದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡುವ ವೇಳೆ ಖರ್ಗೆ ಅಸ್ವಸ್ಥರಾದರು. ಬಳಿಕ ಚೇತರಿಸಿಕೊಂಡು ಮಾತನಾಡಿ, ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಸಾಯುವುದಿಲ್ಲ ಎಂದಿದ್ದರು.
ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಅಮಿತ್ ಶಾ, ‘ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಭಾಷಣದ ವೇಳೆ ಅಸಹ್ಯಕರ ಮತ್ತು ಅವಮಾನಕರವಾಗಿ ವರ್ತಿಸುವಲ್ಲಿ ತಮ್ಮನ್ನು ಮತ್ತು ತಮ್ಮ ನಾಯಕರು ಮತ್ತು ಪಕ್ಷವನ್ನು ಮೀರಿಸಿದ್ದಾರೆ. ಕಾಂಗ್ರೆಸಿಗರು ಪ್ರಧಾನಿ ಮೋದಿಯನ್ನು ಎಷ್ಟು ದ್ವೇಷಿಸುತ್ತಾರೆ ಮತ್ತು ಅವರ ಬಗ್ಗೆ ಭಯವಿದೆ ಎನ್ನುವುದಕ್ಕೆ ಖರ್ಗೆ ಹೇಳಿಕೆಗಳೇ ಉದಾಹರಣೆಯಾಗಿದೆ. ಹೀಗಿದ್ದರೂ ಅವರು ಬೇಗ ಗುಣವಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
Yesterday, the Congress President Shri Mallikarjun Kharge Ji has outperformed himself, his leaders and his party in being absolutely distasteful and disgraceful in his speech.
— Amit Shah (@AmitShah) September 30, 2024
In a bitter display of spite, he unnecessarily dragged PM Modi into his personal health matters by…
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.