ಶ್ರೀನಗರ: ಲೇಹ್ನಲ್ಲಿ ವಿಧಿಸಿದ್ದ ಒಂದು ವಾರದ ಕರ್ಫ್ಯೂ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಲಡಾಖ್ಗೆ 6ನೇ ಪರಿಚ್ಛೇದದ ಮತ್ತು ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಲೇಹ್ನಲ್ಲಿ ಸೆಪ್ಟೆಂಬರ್ 24ರಂದು ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ನಾಲ್ವರು ಮೃತಪಟ್ಟ ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಲಡಾಖ್ನ ಆಡಳಿತ ಆದೇಶಿಸಿದೆ.

ನುಬ್ರಾದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮುಕುಲ್ ಬೆನಿವಾಲ್ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿದ್ದು, ನಾಲ್ಕು ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ, ಪೊಲೀಸರ ಕ್ರಮ, ಸಾವು–ನೋವುಗಳಿಗೆ ಕಾರಣವಾದ ಸಂಗತಿಗಳ ಕುರಿತು ತನಿಖೆ ನಡೆಸಲಾಗುತ್ತದೆ.

ಘಟನೆ ಕುರಿತು ಮಾಹಿತಿ ಹೊಂದಿರುವ ಅಥವಾ ಮೌಖಿಕ ಸಾಕ್ಷ್ಯ, ಲಿಖಿತ ಹೇಳಿಕೆ, ಛಾಯಾಚಿತ್ರ–ವಿಡಿಯೊದಂತಹ ಪುರಾವೆಗಳನ್ನು ಹೊಂದಿರುವ ಯಾವುದೇ ವ್ಯಕ್ತಿಯು ಲೇಹ್ನ ಉಪ ಆಯುಕ್ತರ ಕಚೇರಿಯ ಕಾನ್ಫರೆನ್ಸ್ ಹಾಲ್ಗೆ ಅ.4ರಿಂದ 18ರೊಳಗೆ ಭೇಟಿ ನೀಡಿ ಅಗತ್ಯ ಮಾಹಿತಿ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.ಲಡಾಖ್ ಹಿಂಸಾಚಾರ: 3 Idiots ಚಿತ್ರಕ್ಕೆ ಸ್ಫೂರ್ತಿಯಾದ ವಾಂಗ್ಚುಕ್ ಬಂಧನವೇಕೆ?.ಲಡಾಖ್ ಹಿಂಸಾಚಾರಕ್ಕೆ ವಾಂಗ್ಚುಕ್ ಪ್ರಚೋದನಾಕಾರಿ ಹೇಳಿಕೆ ಕಾರಣ: ಕೇಂದ್ರ ಸರ್ಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.