ಚೆನ್ನೈ: ತಮಿಳುನಾಡಿನ ವಂಡಲೂರ್ ಎಂಬಲ್ಲಿರುವ ‘ಅರಿಗ್ನರ್ ಅಣ್ಣಾ ಜೈವಿಕ ಉದ್ಯಾನ‘ದ ಸಿಂಹವೊಂದು ಕೊರೊನಾ ವೈರಸ್‌ಗೆ ಬಲಿಯಾಗಿದೆ. ಮೃಗಾಲಯದ ಇನ್ನೂ 9 ಸಿಂಹಗಳಿಗೂ ಸೋಂಕು ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಶುಕ್ರವಾರತಿಳಿಸಿದ್ದಾರೆ.

ಸಫಾರಿಯಲ್ಲಿದ್ದ ಒಂಬತ್ತು ವರ್ಷದ 'ನೀಲಾ' ಎಂಬ ಸಿಂಹಿಣಿ ಗುರುವಾರ ವೈರಸ್‌ಗೆ ಬಲಿಯಾಗಿದೆ. ತಮಿಳುನಾಡಿನಲ್ಲಿ ಕೊರೊನಾ ವೈರಸ್‌ಗೆ ಸಿಂಹ ಬಲಿಯಾಗಿರುವುದು ಇದೇ ಮೊದಲು. ಜೈವಿಕ ಉದ್ಯಾನದ 11 ಸಿಂಹಗಳ ಪೈಕಿ ಇನ್ನೂ 9 ಸಿಂಹಗಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ಚೆನ್ನೈ ನಗರದಿಂದ 35 ಕಿ.ಮೀ ದೂರದಲ್ಲಿರುವ ವಂಡಲೂರಿನಲ್ಲಿ 602 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನವನವು ಲಾಕ್‌ಡೌನ್ ಜಾರಿಯಾದ ನಂತರ ಮುಚ್ಚಲಾಗಿತ್ತು.

‘ಸಿಂಹಗಳು ಸೋಂಕಿಗೆ ಒಳಗಾಗಿರುವುದುಮೇ 26 ರಂದು ಬೆಳಕಿಗೆ ಗೊತ್ತಾಯಿತು. 5 ಸಿಂಹಗಳು ಆಹಾರ ಸೇವಿಸುವುದು ಬಿಟ್ಟಿದ್ದವು. ಆಗಾಗ್ಗೆ ಕೆಮ್ಮುತ್ತಿದ್ದವು,‘ ಎಂದು ಉದ್ಯಾನ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.