ಮುಂಬೈ: ‘ಮರಾಠಿಯಲ್ಲಿ ಎಂಬಿಬಿಎಸ್ ಪಠ್ಯಪುಸ್ತಕ ಪ್ರಕಟಣೆಗೆ ಮಾರ್ಗಸೂಚಿ ರೂಪಿಸಲು ಏಳು ಸದಸ್ಯರ ಸಮಿತಿಯನ್ನು ಮಹಾರಾಷ್ಟ್ರ ಸರ್ಕಾರ ರಚಿಸಿದೆ’ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

‘ಈ ಸಮಿತಿಯ ನೇತೃತ್ವವನ್ನು ಇಲಾಖೆಯ ಜಂಟಿ ನಿರ್ದೇಶಕ ಅಜಯ್ ಚಂದನ್‌ವಾಲೆ ಅವರು ವಹಿಸಿಕೊಳ್ಳಲಿದ್ದಾರೆ’ ಎಂದೂ ಅವರು ಹೇಳಿದರು.

ಕೆಲವು ದಿನಗಳ ಹಿಂದಷ್ಟೇ ಮಧ್ಯಪ್ರದೇಶ ಸರ್ಕಾರವು ಹಿಂದಿಯಲ್ಲಿ ಎಂಬಿಬಿಎಸ್ ಪುಸ್ತಕಗಳನ್ನು ಪ್ರಕಟಿಸಿತ್ತು.

‘ಎಂಬಿಬಿಎಸ್ ಕೋರ್ಸ್ ಪುಸ್ತಕಗಳನ್ನು ಪ್ರಕಟಿಸಿದ ಮಧ್ಯಪ್ರದೇಶದ ಅಧಿಕಾರಿಗಳೊಂದಿಗೆ ನಾವು ಮಾತುಕತೆ ನಡೆಸಿದ್ದೇವೆ. ಸಮಿತಿ ಸದಸ್ಯರು ಸಭೆ ಸೇರಿ, ಮರಾಠಿಯಲ್ಲಿ ಎಂಬಿಬಿಎಸ್ ಕೋರ್ಸ್ ಪುಸ್ತಕಗಳ ಪ್ರಕಟಣೆಗೆ ಮಾರ್ಗಸೂಚಿಗಳನ್ನು ಚರ್ಚಿಸುವುದು ನಮ್ಮ ಮುಂದಿನ ಹಂತ. ಈ ಸಭೆ ಮುಂದಿನ ವಾರ ನಡೆಯಬಹುದು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.