ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಘಟಬಂಧನದಿಂದ ಮೂರು ಪಕ್ಷಗಳಿಗೆ ಕೊಕ್‌

Last Updated 10 ಜೂನ್ 2020, 21:07 IST
ಅಕ್ಷರ ಗಾತ್ರ

ಪಟ್ನಾ: ಎನ್‌ಡಿಎ ವಿರುದ್ಧ ಒಗ್ಗಟ್ಟಾಗಿ ‘ಮಹಾಘಟಬಂಧನ’ ರಚಿಸಿಕೊಂಡಿದ್ದ ವಿವಿಧ ರಾಜಕೀಯ ಪಕ್ಷಗಳಲ್ಲಿ ಬಿರುಕು ಕಾಣಿಸಿದೆ. ಬಿಹಾರದಲ್ಲಿ ಇನ್ನು ನಾಲ್ಕು ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಥಳೀಯವಾದ ನಾಲ್ಕು ಪಕ್ಷಗಳನ್ನು ಘಟಬಂಧನದಿಂದ ಹೊರಗಿಡಲು ಈ ಮೈತ್ರಿಯೊಳಗಿರುವ ಪಕ್ಷಗಳು ಚಿಂತನೆ ನಡೆಸಿವೆ.

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಒಟ್ಟಾರೆ 40 ಸ್ಥಾನಗಳಲ್ಲಿ 39ನ್ನು ಎನ್‌ಡಿಎ ಮಿತ್ರಪಕ್ಷಗಳು ಗೆದ್ದುಕೊಂಡಿದ್ದವು. ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದಿರುವ ಘಟಬಂಧನದ ಪಕ್ಷಗಳು, ಮೈತ್ರಿಗೆ ತೊಡಕಾಗಿ ಪರಿಣಮಿಸುತ್ತಿರುವ ಪಕ್ಷಗಳನ್ನು ಹೊರಗಿಡಲು ಗಂಭೀರವಾಗಿ ಚಿಂತಿಸುತ್ತಿವೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಜೀತನ್‌ರಾಂ ಮಾಂಝಿ ನೇತೃತ್ವದ ಹಿಂದೂಸ್ತಾನ್‌ ಅವಾಮ್‌ ಮೋರ್ಚಾ, ಕೇಂದ್ರದ ಮಾಜಿ ಸಚಿವ ಉಪೇಂದ್ರ ಖುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ ಹಾಗೂ ಅಷ್ಟೇನೂ ಜನಪ್ರಿಯವಲ್ಲದ ವಿಕಾಸಶೀಲ ಇನ್ಸಾನ್‌ ಪಾರ್ಟಿಯನ್ನು ಮುಂದಿನ ಒಂದೆರಡು ವಾರಗಳಲ್ಲಿ ಮೈತ್ರಿಯಿಂದ ಹೊರಗಿಡಲಾಗುವುದು ಎಂದು ಹೇಳಲಾಗಿದೆ.

‘ಈ ಮೂರು ಪಕ್ಷಗಳು ತಮ್ಮ ಬಲಿಷ್ಠ ಕ್ಷೇತ್ರಗಳು ಎನಿಸಿಕೊಂಡಲ್ಲೇ ಹೆಚ್ಚಿನ ಮತಗಳನ್ನು ಪಡೆಯುವಲ್ಲಾಗಲಿ, ಮತಗಳನ್ನು ಆರ್‌ಜೆಡಿ ಅಥವಾ ಕಾಂಗ್ರೆಸ್‌ಗೆ ವರ್ಗಾಯಿಸುವಲ್ಲಾಗಲಿ ವಿಫಲವಾಗಿರುವುದು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಂಡುಬಂದಿದೆ. ಹೀಗಿದ್ದರೂ ತಮ್ಮ ಪಾಲನ್ನು ಪಡೆಯಲು ಒತ್ತಡ ಹೇರುತ್ತಿವೆ. ಆದ್ದರಿಂದ ಈ ಪಕ್ಷಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು’ ಎಂದು ಕಾಂಗ್ರೆಸ್‌ನ ಬಿಹಾರ ಘಟಕದ ಮಾಜಿ ಅಧ್ಯಕ್ಷರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT