ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ತಯಾರಿಕಾ ಕಂಪನಿಯ ಗೋದಾಮಿಗೆ ಬೆಂಕಿ; 12 ವಾಹನ ಭಸ್ಮ

ಮಹಾರಾಷ್ಟ್ರದ ಥಾಣೆ ಸಮೀಪದ ಮನ್ಪಾಡದಲ್ಲಿ ನಡೆದ ಘಟನೆ
Last Updated 19 ಫೆಬ್ರುವರಿ 2021, 5:58 IST
ಅಕ್ಷರ ಗಾತ್ರ

ಥಾಣೆ: ಇಲ್ಲಿಗೆ ಸಮೀಪದಲ್ಲಿರುವ ಪ್ರಮುಖ ಆಹಾರ ತಯಾರಕ ಕಂಪನಿಯ ಗೋದಾಮಿಗೆ ಶುಕ್ರವಾರ ಮುಂಜಾನೆ 2.20ರ ಸುಮಾರಿಗೆ ಬೆಂಕಿ ಬಿದ್ದಿದ್ದು, 12 ಸರಕು ಸಾಗಣೆ ವಾಹನಗಳು ಸುಟ್ಟು ಹೋಗಿವೆ.

ಈ ಅವಘಡದಲ್ಲಿ ಯಾವುದೇ ಸಾವುನೋವುಗಳಾದ ವರದಿಯಾಗಿಲ್ಲ.

‘ಮನ್ಪಾಡಾದ ಪ್ರಮುಖ ಆಹಾರ ತಯಾರಕಾ ಕಂಪನಿಯ ಗೋದಾಮಿನಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯಿಂದ ಒಳಗಿದ್ದ 12 ಸರಕು ಸಾಗಣೆ ವಾಹನಗಳು ಮತ್ತು ಅದರೊಳಗಿದ್ದ ಪದಾರ್ಥಗಳು ಸುಟ್ಟು ಹೋದವು‘ ಎಂದು ಥಾಣೆಯ ವಲಯ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಸಂತೋಷ್ ಕದಮ್ ತಿಳಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಸಿಕ್ಕಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ವಾಹನಗಳು, ಬೆಂಕಿ ನಂದಿಸುವ ಕಾರ್ಯ ಕೈಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT