ಕೊಚ್ಚಿ: ಹೈಬ್ರಿಡ್ ಗಾಂಜಾ ಹೊಂದಿದ್ದ ಮಲಯಾಳದ ಖ್ಯಾತ ಚಿತ್ರ ನಿರ್ದೇಶಕರಾದ ಖಾಲಿದ್ ರೆಹಮಾನ್ ಮತ್ತು ಅಶ್ರಫ್ ಹಮ್ಸಾ ಸೇರಿದಂತೆ ಮೂವರನ್ನು ಭಾನುವಾರ ಮುಂಜಾನೆ ಇಲ್ಲಿನ ಫ್ಲಾಟ್ ಒಂದರಲ್ಲಿ ಬಂಧಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
.ಮಲಯಾಳ ಸುದ್ದಿ ವಾಹಿನಿಯ ಮೂವರು ಪತ್ರಕರ್ತರ ವಿರುದ್ಧ ಪೋಕ್ಸೊ ಪ್ರಕರಣ!.
ಅವರಿಂದ 1.63 ಗ್ರಾಂ ಹೈಬ್ರಿಡ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಮೂವರನ್ನೂ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಛಾಯಾಗ್ರಾಹಕ ಸಮೀರ್ ತಾಹಿರ್ ಬಾಡಿಗೆಗೆ ಪಡೆದ ಫ್ಲಾಟ್ ನಲ್ಲಿ ಮಾದಕ ದ್ರವ್ಯ ಬಳಸಲಾಗುತ್ತಿದೆ ಎಂಬ ಸುಳಿವು ಪಡೆದ ವಿಶೇಷ ದಳವು ಬೆಳಗಿನ ಜಾವ 2.00 ಗಂಟೆ ಸುಮಾರಿಗೆ ಫ್ಲಾಟ್ ಮೇಲೆ ದಾಳಿ ನಡೆಸಿದೆ ಎಂದು ಅಬಕಾರಿ ಮೂಲಗಳು ತಿಳಿಸಿವೆ.

ರೆಹಮಾನ್ ಮತ್ತು ಹಮ್ಸಾ ಅವರೊಂದಿಗೆ ಬಂಧಿಸಲಾದ ಮೂರನೇ ವ್ಯಕ್ತಿ ಅವರ ಸ್ನೇಹಿತ ಶಾಲಿಫ್ ಮೊಹಮ್ಮದ್ ಎಂದು ಪೊಲೀಸರು ತಿಳಿಸಿದ್ದಾರೆ.
.ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳ ನಿರ್ದೇಶಕ ರಂಜಿತ್ ವಿರುದ್ಧದ ಪ್ರಕರಣಕ್ಕೆ ತಡೆ.
‘ಅವರಿಂದ 1.63 ಗ್ರಾಂ ಹೈಬ್ರಿಡ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅವರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯ ವಿವಿಧ ಕಲಂಗಳಡಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದು ಅಬಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವರು ಹೊಂದಿದ್ದ ಮಾದಕ ದ್ರವ್ಯಗಳ ಮೂಲವನ್ನು ಕಂಡುಹಿಡಿಯಲು ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಬಕಾರಿ ತಿಳಿಸಿದೆ.

ಖಾಲಿದ್ ರೆಹಮಾನ್ ‘ಅನುರಾಗ ಕರಿಕ್ಕಿನ್ವೆಳ್ಳಂ’ ಮತ್ತು ‘ಉಂಡಾ’ ನಂತಹ ಹಿಟ್ ಚಲನಚಿತ್ರಗಳ ನಿರ್ದೇಶನ ಮಾಡಿದ್ದಾರೆ. ಅಶ್ರಫ್ ಹಮ್ಸಾ ‘ಭೀಮಂಡೆ ವಯಿ’ ಸೇರಿದಂತೆ ಹಲವು ಚಲನಚಿತ್ರಗಳ ನಿರ್ಮಾಪಕರು. ರೆಹಮಾನ್ ಅವರ ಇತ್ತೀಚಿನ ಚಿತ್ರ ‘ಆಲಪ್ಪುಳ ಜಿಮ್ಖಾನಾ’ ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.
.ಅತ್ಯಾಚಾರ ಪ್ರಕರಣ: ಮಲಯಾಳ ನಟ ಸಿದ್ದೀಕ್ಗೆ ನಿರೀಕ್ಷಣಾ ಜಾಮೀನು ಮಂಜೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.