ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ದರ ತಾರತಮ್ಯ: ಮಮತಾ ವಾಗ್ದಾಳಿ

ರಾಜ್ಯ, ಕೇಂದ್ರ, ವಯಸ್ಸು ಯಾವುದನ್ನೂ ಪರಿಗಣಿಸದೇ ‘ಏಕ ರೂಪ‘ ದರ ನಿಗದಿಗೆ ಒತ್ತಾಯ
Last Updated 22 ಏಪ್ರಿಲ್ 2021, 10:29 IST
ಅಕ್ಷರ ಗಾತ್ರ

ಕೋಲ್ಕತ್ತಾ: ಕೇಂದ್ರ, ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುವ ಕೊರೊನಾ ಲಸಿಕೆಗೆ ದರ ನಿಗದಿಯಲ್ಲಾಗಿರುವ ‘ಅಸಮಾನತೆ‘ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಲಸಿಕೆಗೆ ಏಕರೂಪ ದರ ನಿಗದಿ‍ಪಡಿಸಬೇಕು‘ ಎಂದು ಒತ್ತಾಯಿಸಿದರು.

‘ಯಾವಾಗಲೂ ಒಂದು ದೇಶ, ಒಂದು ಪಕ್ಷ, ಒಬ್ಬ ನಾಯಕ‘ ಎಂದು ಕೂಗಾಡುವ ಬಿಜೆಪಿ, ದೇಶದ ಜನರ ಜೀವ ಉಳಿಸುವ ಲಸಿಕೆಯ ವಿಚಾರದಲ್ಲಿ ಏಕೆ ಒಂದೇ ಬೆಲೆಯನ್ನು ನಿಗದಿಪಡಿಸುವುದಿಲ್ಲ‘ ಎಂದು ಮಮತಾ ಪ್ರಶ್ನಿಸಿದ್ದಾರೆ. ಲಸಿಕೆಗೆ ದರ ನಿಗದಿ ವಿಚಾರದಲ್ಲಿ, ರಾಜ್ಯ, ಕೇಂದ್ರ, ವಯಸ್ಸುಯಾವುದನ್ನೂ ನೋಡದೇ ಏಕರೂಪ ದರವನ್ನು ನಿಗದಿಪಡಿಸಬೇಕು‘ ಎಂದು ಮಮತಾ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT