ಕೋಲ್ಕತ್ತ: ಪ್ರಾಯಶಃ ದೇಶದಲ್ಲೇ ಮೊದಲ ಘಟನೆ ಎಂಬಂತೆ ಪಶ್ಚಿಮ ಬಂಗಾಳದ ಕ್ಯಾನ್ಸರ್ ರೋಗಿಯೊಬ್ಬರು ತಮ್ಮ ಸಾವಿಗೂ ಮೊದಲು ಕೋವಿಡ್ ಸಾಂಕ್ರಾಮಿಕ ರೋಗದ ವೈದ್ಯಕೀಯ ಸಂಶೋಧನೆಗಾಗಿ ದೇಹದಾನ ಮಾಡಿದ್ದಾರೆ.

ಸಾಯುವ ಮೊದಲು ರೋಗಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಬಳಿಕ ವೈದ್ಯಕೀಯ ಸಂಶೋಧನೆಗಾಗಿ ದೇಹವನ್ನು ದಾನ ಮಾಡಲು ನಿರ್ಧರಿಸಿದ್ದರು.

ಇದನ್ನೂ ಓದಿ:ದಾನವಾಗಿ ನೀಡಲು ಹೆಣ್ಣು ಆಸ್ತಿಯಲ್ಲ: ನ್ಯಾಯಾಲಯ ಅಭಿಪ್ರಾಯ

ಕೋಲ್ಕತ್ತದ ನ್ಯೂ ಟೌನ್ ಪ್ರದೇಶದ 89 ವರ್ಷದ ನಿವಾಸಿ ನಿರ್ಮಲ್ ದಾಸ್ ಎಂಬವರು ಸ್ವಯಂ ಪ್ರೇರಿತವಾಗಿ ದೇಹದಾನ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿರ್ಮಲ್ ದಾಸ್ ಅವರ ದೇಹವನ್ನು ಶನಿವಾರ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗಕ್ಕೆ ದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.