ಇಂಫಾಲ: ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ 8 ಮಂದಿ ಉಗ್ರಗಾಮಿಗಳನ್ನು ಇಂಫಾಲ ಪಶ್ಚಿಮ, ಬಿಷ್ಣುಪುರ, ತೆಂಗನೌಪಾಲ್ ಹಾಗೂ ಚಂಡೇಲ್ ಜಿಲ್ಲೆಗಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
.ಮಣಿಪುರ: ಕಾಮಗಾರಿ ವೇಳೆ ಎರಡನೇ ಮಹಾಯುದ್ಧದ ಅವಶೇಷಗಳು ಪತ್ತೆ.
ಸುಲಿಗೆಯಲ್ಲಿ ತೊಡಗಿದ್ದ ನಿಷೇಧಿತ ಕಾಂಗ್ಲೆಪಾಕ್ ಕಮ್ಯನಿಷ್ಟ್ ಪಕ್ಷದ (ತೈಬುಂಗ್ನಬಾ) ಇಬ್ಬರು ಕಾರ್ಯಕರ್ತರು ಇಂಫಾಲ ಪಶ್ಚಿಮ ಜಿಲ್ಲೆಯ ಟಕ್ಯೆಲ್ ಖೋಂಗ್ಬಾಲ್ ಹಾಗೂ ಖ್ಯುಯತೊಂಗ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರೆಕಾಪ್ ಜಾಗೂ ಪಿಎಲ್ಎ ಸಂಘಟನೆಗೆ ಸೇರಿದ ತಲಾ ಓರ್ವ ಉಗ್ರರನ್ನು ತೆಂಗನೌಪಾಲ್ ಜಿಲ್ಲೆಯ ಕಾಡಿನಲ್ಲಿ ಮಂಗಳವಾರ ಬಂಧಿಸಲಾಗಿದೆ.
.ಮಣಿಪುರ: 8 ಬಂಡುಕೋರರ ಬಂಧನ .
ಪ್ರೆಪಾಕ್ ಪ್ರೊ ಸಂಘಟನೆಗೆ ಸೇರಿದ ಒಬ್ಬ ಉಗ್ರನನ್ನು ಇಂಫಾಲ ಪಶ್ಚಿಮ ಜಿಲ್ಲೆಯ ತಾಬುನ್ಖೋಕ್ ಸಗೈನ ಇಟ್ಟಿಗೆ ಕಾರ್ಖಾನೆಯಲ್ಲಿ ಬಂಧಿಸಲಾಗಿದೆ. ಸುಲಿಗೆ ನಿರತನಾಗಿದ್ದ ಕೆಸಿಪಿ (ಎಂಸಿ)ಗೆ ಸೇರಿದ ಮತ್ತೊಬ್ಬ ಉಗ್ರನನ್ನು ಬಿಷ್ಣುಪುರ ಜಿಲ್ಲೆಯಲ್ಲಿ ಬುಧವಾರ ಬಂಧಿಸಲಾಗಿದೆ.

ಸೋಮವಾರ, ಸಂಯುಕ್ತ ಕುಕಿ ರಾಷ್ಟ್ರೀಯ ಸೇನೆಗೆ ಸೇರಿದ ಕಾರ್ಯಕರ್ತನನ್ನು ಚಂಡೇಲ್ ಜಿಲ್ಲೆಯ ಸುಂಗು–ಚಂಡೆಲ್ ರಸ್ತೆಯಲ್ಲಿ ಬಂಧಿಸಲಾಗಿದೆ.

ಸುಲಿಗೆ ಮಾಡುತ್ತಿದ್ದ ಕೆಸಿಪಿ (ಪಿಡಬ್ಲ್ಯುಜಿ) ಸಂಘಟನೆಯ ಉಗ್ರನನ್ನು ಇಂಫಾಲ ಪಶ್ಚಿಮ ಜಿಲ್ಲೆಯ ಮಹಾರಬಿ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
.ಮಣಿಪುರ: ನಿಷೇಧಿತ ಸಂಘಟನೆಗಳ ಮೂವರು ಉಗ್ರರ ಬಂಧನ, ಶಸ್ತ್ರಾಸ್ತ್ರ ವಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.