ಇಂಫಾಲ: 2016ರಲ್ಲಿ ರಚಿಸಲಾದ ಏಳು ಜಿಲ್ಲೆಗಳ ರಚನೆಯನ್ನು ಹಿಂದಕ್ಕೆ ಪಡೆಯುವ ಬೇಡಿಕೆಯ ಕುರಿತು ಸೇನಾಪತಿ ಜಿಲ್ಲೆಯಲ್ಲಿ ಕೇಂದ್ರ, ಮಣಿಪುರ ಸರ್ಕಾರ ಮತ್ತು ಯುನೈಟೆಡ್ ನಾಗಾ ಕೌನ್ಸಿಲ್ (ಯುಎನ್ಸಿ) ನಡುವೆ ಶುಕ್ರವಾರ ನಡೆದ ತ್ರಿಪಕ್ಷೀಯ ಮಾತುಕತೆಗಳು ಯಾವುದೇ ಫಲ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮ್ಜಾಂಗ್, ಫರ್ಜಾಲ್, ಕಾಕ್ಚಿಂಗ್, ಕಾಂಗ್ಪೊಕ್ಪಿ, ಟೆಂಗ್ನೌಪಾಲ್, ನೋನಿ ಮತ್ತು ಜಿರೀಬಾಮ್ಗಳ ರಚನೆಯನ್ನು ಹಿಂಪಡೆಯಲು ಯುಎನ್ಸಿ ಒತ್ತಾಯಿಸುತ್ತಿದೆ. ಒ ಇಬೋಬಿ ಸಿಂಗ್ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಜಿಲ್ಲೆಗಳನ್ನು ರಚಿಸಲಾಗಿತ್ತು.

ಕೆಲವು ತೊಡಕುಗಳು ಇದ್ದಿದ್ದರಿಂದ ಬಲವಾದ ಪ್ರಸ್ತಾವನೆಯನ್ನು ಮುಂದಿಡಲು ಮಣಿಪುರ ಸರ್ಕಾರದ ಪ್ರತಿನಿಧಿಗಳು ಅಸಹಾಯಕತೆ ವ್ಯಕ್ತಪಡಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಯುಎನ್ಸಿ, ಮುಂದಿನ ಸುತ್ತಿನ ಮಾತುಕತೆಗಳಲ್ಲಿ ಬಲವಾದ ಪ್ರಸ್ತಾವನೆಯನ್ನು ಸಲ್ಲಿಸಬೇಕೆಂದು ಒತ್ತಾಯಿಸಿತು.

ಸಭೆ ಸೌಹಾರ್ದಯುತವಾಗಿ ನಡೆದಿದ್ದು, ಹಿಂದಿನ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ರಾಜಕೀಯವಾಗಿ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ನಿರಂತರ ರೀತಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮತ್ತಷ್ಟು ಪ್ರಗತಿ ಸಾಧಿಸಲು ಪರಸ್ಪರ ಒಪ್ಪಿಗೆ ನೀಡಲಾಯಿತು ಎಂದು ಕೇಂದ್ರ, ರಾಜ್ಯ ಸರ್ಕಾರ ಮತ್ತು ಯುಎನ್ಸಿ ಪ್ರತಿನಿಧಿಗಳು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮುಂದಿನ ಸುತ್ತಿನ ಮಾತುಕತೆ ಜನವರಿ ಕೊನೆಯ ವಾರದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
.ಮಣಿಪುರ ಹಿಂಸಾಚಾರ: ಇಂಫಾಲ್ ಕಣಿವೆಯಲ್ಲಿ 13 ದಿನಗಳ ಬಳಿಕ ಶಾಲಾ–ಕಾಲೇಜು ಪುನರಾರಂಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.