ಬದಾನ್: ಉತ್ತರ ಪ್ರದೇಶದ ತಿಗಳ್ಪುರ್ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಕಲಿ ಮದ್ಯ ಹಂಚಿದ್ದು, ಅದನ್ನು ಸೇವಿಸಿದ್ದವರ ಪೈಕಿ ಇಬ್ಬರು ಸಾವನ್ನಪ್ಪಿದ್ದರೆ, ಓರ್ವ ದೃಷ್ಟಿ ಕಳೆದುಕೊಂಡಿದುಕೊಂಡಿದ್ದಾನೆ, ಹಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಳಿ ಸಂದರ್ಭದಲ್ಲಿ ಪಂಚಾಯತ್ ಚುನಾವಣೆ ಸಂಬಂಧ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಮದ್ಯ ಹಂಚಿದ್ದರು. ಅದನ್ನು ಸೇವಿಸಿದ ಸಂಜಯ್ ಸಿಂಗ್ ಮತ್ತು ಪ್ರೇಮದಾಸ್ ಎಂಬಿಬ್ಬರು ಸಾವನ್ನಪ್ಪಿದ್ದಾರೆ. ಅಮರ್ ಸಿಂಗ್ ಎಂಬವರ ದೃಷ್ಟಿ ಹೊರಟುಹೋಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಕಲ್ಪ್ ಶರ್ಮಾ ತಿಳಿಸಿದ್ದಾರೆ.
ಮದ್ಯ ಸೇವಿಸಿ ಅಸ್ವಸ್ಥರಾಗಿದ್ದ ಸಂಜಯ್ ಸಿಂಗ್ ಮತ್ತು ಪ್ರೇಮದಾಸ್ ಇಬ್ಬರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಮೂವರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಾ ರಂಜನ್ ಈ ವಿಚಾರವನ್ನು ತನಿಖೆ ಮಾಡುವುದಾಗಿ ಹೇಳಿದ್ದಾರೆ.