ಮರಾಠಿ ಮುಂಬೈ ಭಾಷೆ: ಭಯ್ಯಾಜಿ ಸ್ಪಷ್ಟನೆ
ಮುಂಬೈ: ತಮ್ಮ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೆ ಸ್ಪಷ್ಟನೆ ನೀಡಿರುವ ಆರ್‌ಎಸ್‌ಎಸ್ ನಾಯಕ ಸುರೇಶ್ ಭಯ್ಯಾಜಿ ಜೋಶಿ ‘ಮರಾಠಿ ಮುಂಬೈನ ಭಾಷೆಯಾಗಿದ್ದು ಹೊರಗಡೆಯಿಂದ ಬರುವ ಇತರ ಭಾಷಿಕರು ಇದನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಹೇಳಿದರು. ‘ಮಾತೃ ಭಾಷೆಯಾದ ಮರಾಠಿ ಬಗ್ಗೆ ನನಗೆ ಹೆಮ್ಮೆಯಿದೆ. ಮರಾಠಿಯು ಮುಂಬೈ ಮತ್ತು ಮಹಾರಾಷ್ಟ್ರದ ಭಾಷೆ ಎಂಬುದರಲ್ಲಿ ಎರಡು ಮಾತಿಲ್ಲ’ ಎಂದರು.