ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಓಡಿ ಹೋದ ಕೇಂದ್ರ ಸಚಿವೆ ಮೀನಾಕ್ಷಿ!

Published 31 ಮೇ 2023, 16:25 IST
Last Updated 31 ಮೇ 2023, 16:25 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಭಟನಾ ನಿರತ ಕುಸ್ತಿಪಟುಗಳ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಓಡಿ ಹೋಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸದೆ ಸಚಿವೆ ಮೀನಾಕ್ಷಿ 'ಚಲೋ, ಚಲೋ, ಚಲೋ' ಎಂದು ತಮ್ಮ ಕಾರಿನತ್ತ ಓಡಿದ್ದಾರೆ. ‘ಪ್ರತಿಭಟಿಸುತ್ತಿರುವ ಕುಸ್ತಿಪಟುಗಳ ಬಗ್ಗೆ ನೀವು ಏನು ಹೇಳುತ್ತೀರಿ?’ ಎಂದು ಅವರನ್ನು ವರದಿಗಾರ್ತಿಯೊಬ್ಬರು ಕೇಳುತ್ತಾರೆ. ಆದರೆ, ಅದಕ್ಕೆ ಉತ್ತರಿಸದೆ ಮೀನಾಕ್ಷಿ ಅವರು ಓಡಿ ಹೋಗಿದ್ದಾರೆ. ಅವರನ್ನು ಹಿಂಬಾಲಿಸಿ ಸುದ್ದಿಗಾರರು ಓಡಿದಾಗ, 'ಕಾನೂನು ಪ್ರಕ್ರಿಯೆ ನಡೆಯುತ್ತದೆ' ಎಂದು ಮೀನಾಕ್ಷಿ ಹೇಳಿದ್ದಾರೆ.

ಮೀನಾಕ್ಷಿ ಲೇಖಿ ಅವರ ನಡೆ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಪ್ರಶ್ನೆಗಳು ಎದುರಾದರೆ ಓಡುವುದು ಬಿಜೆಪಿಗರ ಜಾಯಮಾನ! ‘ವಣಕ್ಕಂ ಪುದುಚೇರಿ’, ‘ಓಹ್ ಮೈ ಗಾಡ್’ ಖ್ಯಾತಿಯ ನರೇಂದ್ರ ಮೋದಿಯವರ ಪಾಲಾಯವಾದದ ಆದರ್ಶವನ್ನೇ ಅವರ ಸಚಿವರೂ ಪಾಲಿಸುತ್ತಿದ್ದಾರೆ! ಇಂತಹ ಹೇಡಿಗಳ, ಪಲಾಯನವಾದಿಗಳ ಕೈಯಲ್ಲಿ ಭಾರತವಿರುವುದು ದುರಂತ. ಒಲಿಂಪಿಕ್ಸ್ ಓಟದ ಸ್ಪರ್ಧೆಗೆ ಮೀನಾಕ್ಷಿ ಲೇಖಿಯವರನ್ನೇ ಕಳಿಸುವುದು ಒಳ್ಳೆಯದಲ್ಲವೇ’ ಎಂದು ಪ್ರಶ್ನಿಸಿದೆ.

ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ದೆಹಲಿಯಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಬ್ರಿಜ್‌ಭೂಷಣ್ ವಿರುದ್ಧ ಹೋರಾಟ ತೀವ್ರಗೊಳಿಸಿದ್ದ ಕುಸ್ತಿಪಟುಗಳು ಮಂಗಳವಾರ ಹರಿದ್ವಾರಕ್ಕೆ ತೆರಳಿ ಗಂಗಾ ನದಿಯಲ್ಲಿ ತಮ್ಮ ಒಲಿಂಪಿಕ್ಸ್ ಪದಕಗಳನ್ನು ಎಸೆಯಲು ಮುಂದಾಗಿದ್ದರು. ರೈತ ಮುಖಂಡರ ಮಧ್ಯಪ್ರವೇಶಿಸಿದ ಬಳಿಕ ಅವರು ತಮ್ಮ ನಿರ್ದಾರದಿಂದ ಹಿಂದೆ ಸರಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT