ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾಲೆಸ್ಟೀನಿಯರ ಸಹಾಯಕ್ಕೆ ಧ್ವನಿ ಎತ್ತಿದ ಪ್ರತಿಪಕ್ಷಗಳು

Published 25 ಆಗಸ್ಟ್ 2024, 14:03 IST
Last Updated 25 ಆಗಸ್ಟ್ 2024, 14:03 IST
ಅಕ್ಷರ ಗಾತ್ರ

ನವದೆಹಲಿ: ಪ್ಯಾಲೆಸ್ಟೀನ್‌ ನಾಗರಿಕರ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿ, ಸಂತ್ರಸ್ತರಿಗೆ ಶಾಂತಿ ಮತ್ತು ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಕಾರ್ಯನಿರ್ವಹಿಸಬೇಕು ಎಂದು ಪ್ರತಿಪಕ್ಷಗಳ ಸದಸ್ಯರು ಭಾನುವಾರ ಒತ್ತಾಯಿಸಿದ್ದಾರೆ. 

ಕಾಂಗ್ರೆಸ್, ಎಸ್‌ಪಿ, ಜೆಡಿ(ಯು) ಮತ್ತು ಆಮ್ ಅದ್ಮಿ ಪಕ್ಷ ಸೇರಿದಂತೆ ಹಲವು ಪಕ್ಷಗಳ ಸದಸ್ಯರು ಸಭೆ ನಡೆಸಿ, ಪ್ಯಾಲೆಸ್ಟೀನಿಯರಿಗೆ ತಮ್ಮ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ಸಮಾಜವಾದಿ ಪಕ್ಷದ ಸಂಸದರಾದ ಜಾವೇದ್ ಅಲಿ ಮತ್ತು ಮೊಹಿಬ್ಬುಲಾ, ಎಎಪಿ ಸಂಸದ ಸಂಜಯ್ ಸಿಂಗ್, ಜೆಡಿಯು ನಾಯಕ ಕೆ. ಸಿ. ತ್ಯಾಗಿ ಮತ್ತು ಕಾಂಗ್ರೆಸ್‌ನ ಡ್ಯಾನಿಶ್ ಅಲಿ ಮತ್ತು ಅಲ್-ಕುದ್ಸ್‌ನ ಸಂಸದೀಯ ಲೀಗ್‌ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮಕ್ರಮ್ ಬಲಾವಿ ಅವರು ಸಭೆಯಲ್ಲಿ ಭಾಗಿಯಾಗಿದ್ದರು.

ನಾಗರಿಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುತ್ತಿದೆ ಎಂದು ಬಲಾವಿ ವಿವರಿಸಿ, ದಾಳಿಯಲ್ಲಿ ಸತ್ತವರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಮಕ್ಕಳಿದ್ದಾರೆ ಎಂದು ಹೇಳಿದರು.

‘ಜಿಯೋನಿಸ್ಟ್ ಆಕ್ರಮಣ ಮತ್ತು ಇಸ್ರೇಲ್‌ನಿಂದ ಪ್ಯಾಲೆಸ್ಟೀನ್‌ ನಾಗರಿಕರನ್ನು ಹತ್ಯೆ ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ’ ಎಂದು ವಿವಿಧ ಪಕ್ಷಗಳ ಸದಸ್ಯರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT