‘ಮೊದಲು ಜೀವ ಉಳಿಸಿಕೊಳ್ಳಿ ಎಂದಿದ್ದರು’
‘ನಮ್ಮ ದಾಳಿಯು ಎಷ್ಟು ತೀವ್ರವಾಗಿತ್ತೆಂದರೆ ಪಾಕಿಸ್ತಾನ ಸೇನಾ ಪಡೆಗಳು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಮುಂದಾದರು. ಆಸ್ತಿ ಹಾನಿಯ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ‘ಮೊದಲು ನಿಮ್ಮ ಜೀವ ಉಳಿಸಿಕೊಳ್ಳಿ’ ಎಂದು ಪಾಕಿಸ್ತಾನ ಸೇನಾ ಕಮಾಂಡರ್ ಹೇಳಿದ್ದರು’ ಎಂದು ಚಿನಾರ್ ಕೋರ್‌ನ ಅಧಿಕಾರಿಗಳು ಮಾಹಿತಿ ನೀಡಿದರು. ಮೇ 7ರಂದು ಮುಜಾಫರಾಬಾದ್ ಮೇಲೆ 25 ನಿಮಿಷಗಳವರೆಗೆ ನಡೆಸಿದ ‘ಆಪರೇಷನ್ ಸಿಂಧೂರ’ದ ಕುರಿತು ವಿವರಿಸಿದರು.