ಹೈದರಾಬಾದ್: ಥಾಯ್ಲೆಂಡ್ನ ಒಪಾಲ್ ಸುಚಾತಾ ಚೌಂಗಶ್ರೀ ಅವರು 2025ರ ಸಾಲಿನ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡರು. ಇಥಿಯೋಪಿಯಾದ ಹಾಸೆಟ್ ಡೆರೆಜ್ ಅದ್ಮಾಸ್ಸು ‘ರನ್ನರ್ ಅಪ್’ ಆದರು.

ವಿಶ್ವಸುಂದರಿ ಸ್ಪರ್ಧೆಯ 72ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆ ಶನಿವಾರ ಸಂಜೆ ಇಲ್ಲಿನ ಹೈಟೆಕ್ ಎಕ್ಸಿಬಿಷನ್ ಸೆಂಟರ್ನಲ್ಲಿ ನಡೆಯಿತು.

ಭಾರತವನ್ನು ಪ್ರತಿನಿಧಿಸಿದ ನಂದಿನಿ ಗುಪ್ತಾ ಅವರು ಅಗ್ರ 8ರಲ್ಲಿ ಸ್ಥಾನ ಪಡೆಯುವ ಮುನ್ನವೇ ಹೊರಬಿದ್ದರು. ಅವರು ಬಹಳ ನಿರೀಕ್ಷೆ ಹುಟ್ಟಿಹಾಕಿದ್ದರು. ಆದರೆ, ಸುಚಾತಾ (Opal Suchata CHUANGSIRI) ಹಾಗೂ ಇನ್ನುಳಿದ ಏಳು ಸ್ಪರ್ಧಿಗಳ ಎದುರು ಸೋತರು.

ಶನಿವಾರ ಸಂಜೆ ಹೈದರಾಬಾದ್ನಲ್ಲಿ ಜರುಗಿದ ಗ್ರ್ಯಾಂಡ್ ಫಿನಾಲೆಯಲ್ಲಿ ವಿಶ್ವ ಸುಂದರಿ ಕಿರೀಟವು ಸುಚಾತಾ ಅವರ ಪಾಲಾಯಿತು. ವಿಜೇತರಿಗೆ ಒಂದು ಮಿಲಿಯನ್ ಡಾಲರ್ ಅಂದರೆ ಸುಮಾರು 8 ಕೋಟಿ ರೂಪಾಯಿಯ ಬೆಲೆ ಬಾಳುವ ವಜ್ರದ ಕಿರೀಟವನ್ನು ಅವರ ಮುಡಿಗೆ ಸಿಂಗರಿಸಲಾಯಿತು.

ಇಥಿಯೋಪಿಯಾದ ಸುಂದರಿ ಮೊದಲ ರನ್ನರ್ ಅಪ್ ಆದರು.

ಪೊಲ್ಯಾಂಡ್ನ ಸುಂದರಿ 2ನೇ ರನ್ನರ್ ಅಪ್ ಆದರು

ಕೆರೆಬಿಯನ್ ದ್ವೀಪದ ಸುಂದರಿ 3ನೇ ರನ್ನರ್ ಅಪ್ ಆದರು.

ವಿಶ್ವ ಸುಂದರಿಯ ಆಯ್ಕೆ ಪ್ರಕ್ರಿಯೆ ಹೀಗಿತ್ತು..

ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ ಒಟ್ಟು 108 ಸ್ಪರ್ಧಿಗಳು ಭಾಗವಹಿಸಿದ್ದರು. ಕಳೆದ ಒಂದು ತಿಂಗಳಿನಿಂದ ವಿವಿಧ ಸುತ್ತುಗಳಲ್ಲಿ ಈ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಅಮೆರಿಕ ಮತ್ತು ಕೆರಿಬಿಯನ್, ಯುರೋಪ್, ಏಷ್ಯಾ ಹಾಗೂ ಓಸಿನಿಯಾ ಎಂಬ ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಿಂದ ಒಂದು ವಿಭಾಗದಿಂದ 10 ಜನರನ್ನು ಸೆಮಿಫೈನಲ್ಸ್ಗೆ ಆಯ್ಕೆ ಮಾಡಲಾಗುತ್ತದೆ. ನಂತರ ಒಂದು ವಿಭಾಗದಿಂದ 4 ಜನರಂತೆ 16 ಸ್ಪರ್ಧಿಗಳನ್ನು ಫೈನಲ್ಗೆ ಆಯ್ಕೆಮಾಡಲಾಗಿತ್ತು. ಅದರಲ್ಲಿ ಟಾಪ್ 8 ಹಾಗೂ ಫೈನಲ್ ನಡೆಯುತ್ತದೆ. ವಿಶ್ವ ಸುಂದರಿಯ ಜೊತೆಗೆ ಫೈನಲ್ ಪ್ರವೇಶಿಸಿದ ಮೂವರಿಗೆ ರನ್ನರ್ ಅಪ್ ಸ್ಥಾನ ಲಭಿಸಿದೆ.

ಗ್ರ್ಯಾಂಡ್ ಫಿನಾಲೆಯ ನಿರೂಪಣೆಯನ್ನು 2016ರ ವಿಶ್ವ ಸುಂದರಿ ಸ್ಪರ್ಧೆಯ ವಿಜೇತೆ ಸ್ಟೆಫನಿ ಡೆಲ್ ವ್ಯಾಲೆ ನಡೆಸಿಕೊಟ್ಟರು. ಅವರೊಂದಿಗೆ ಭಾರತದ ಸಚಿನ್ ಕುಂಬಾರ್ ಇದ್ದರು.

ಕಾರ್ಯಕ್ರಮದಲ್ಲಿ 2017ರಲ್ಲಿ ವಿಶ್ವ ಸುಂದರಿಯಾಗಿದ್ದ ಮಾನುಶಿ ಚಿಲ್ಲರ್, ಬಾಲವುಡ್ ನಟ ಸೋನು ಸೂದ್ ಸೇರಿದಂತೆ ಹಲವು ನಟ - ನಟಿಯರು ಭಾಗವಹಿಸಿದ್ದರು.

ಜಾಗತಿಕ ಮಟ್ಟದಲ್ಲಿ ನಡೆಯುವ ಈ ಸ್ಪರ್ಧೆಯು ಮಹಿಳೆಯರಲ್ಲಿ ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ವೈವಿಧ್ಯತೆ, ನಾಯಕತ್ವ ಗುಣ ಸೇರಿದಂತೆ ಮಹಿಳಾ ಸಬಲೀಕರಣಕ್ಕೆ ನೆರವಾಗುತ್ತದೆ.

1996 ಹಾಗೂ 2024ರ ನಂತರ ಭಾರತವು ಮೂರನೇ ಬಾರಿಗೆ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯ ವಹಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.