ನವದೆಹಲಿ/ಪ್ಯಾರಿಸ್: ರಕ್ಷಣಾ ಒಪ್ಪಂದಗಳು ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಸ್ಥಿರತೆ ಖಾತ್ರಿಯ ಜಂಟಿ ಉದ್ದೇಶದೊಂದಿಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಫ್ರಾನ್ಸ್ ಪ್ರವಾಸ ಕೈಗೊಳ್ಳಲಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ‘ಬಾಸ್ಟಿಲ್ ಡೇ (ಫ್ರಾನ್ಸ್ ರಾಷ್ಟ್ರೀಯ ದಿನ)’ ಆಚರಣೆಗೆ ಮೋದಿ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದಾರೆ. ಭಾರತದ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ತುಕಡಿಗಳು ಪರೇಡ್ನಲ್ಲಿ ಭಾಗವಹಿಸಲಿವೆ. 2015ರಲ್ಲಿ ಫ್ರಾನ್ಸ್ನಿಂದ ಖರೀದಿಸಲಾಗಿದ್ದ 36 ರಫೇಲ್ ಫೈಟರ್ ಜೆಟ್ಗಳ ಪೈಕಿ 2 ಜೆಟ್ಗಳು ಈ ಪರೇಡ್ನಲ್ಲಿ ತಾಲೀಮು ಪ್ರದರ್ಶಿಸಲಿವೆ.

ಈ ಭೇಟಿಯು ‘ರಕ್ಷಣಾ ಕಾರ್ಯತಂತ್ರ, ಸಾಂಸ್ಕೃತಿಕ, ವೈಜ್ಞಾನಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಹಕಾರದಂಥ ವಲಯಗಳಲ್ಲಿ ಭವಿಷ್ಯದ ಪಾಲುದಾರಿಕೆಯ ಯೋಜನೆ ರೂಪಿಸಲು ಅವಕಾಶ ಒದಗಿಸುತ್ತದೆ’ ಎಂದು ಭಾರತ ಸರ್ಕಾರ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

ಎರಡು ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಗೆ ಈ ವರ್ಷ 25 ವರ್ಷ. ಈ ಅವಧಿಯಲ್ಲಿ ಕೈಗೊಳ್ಳಲಾಗುತ್ತಿರುವ ಹೊಸ ಮಿಲಿಟರಿ ಒಪ್ಪಂದಗಳು ಎರಡು ರಾಷ್ಟ್ರಗಳ ನಡುವಿನ ಆಳವಾದ ರಕ್ಷಣಾ ಸಂಬಂಧಕ್ಕೆ ಸಾಕ್ಷಿಯಾಗುತ್ತಿವೆ.

ದಶಕಗಳಿಂದಲೂ ಭಾರತಕ್ಕೆ ಫ್ರಾನ್ಸ್ ಅತ್ಯಂತ ನಿಕಟ ಪಾಲುದಾರ ರಾಷ್ಟ್ರ. 1998ರಲ್ಲಿ ಭಾರತವು ಪರಮಾಣು ಪರೀಕ್ಷೆ ನಡೆಸಿದ ಬಳಿಕ ಹಲವು ಪಾಶ್ಚಾತ್ಯ ರಾಷ್ಟ್ರಗಳು ನಿರ್ಬಂಧ ವಿಧಿಸಿದ್ದವಾದರೂ, ಫ್ರಾನ್ಸ್ ಹಾಗೆ ಮಾಡಿರಲಿಲ್ಲ. ಹತ್ತು ವರ್ಷಗಳ ನಂತರ, ಭಾರತವು ತನ್ನ ನಾಗರಿಕ ಪರಮಾಣು ಯೋಜನೆಗಳಿಗಾಗಿ ಪರಮಾಣು ಪೂರೈಕೆದಾರರ ಗುಂಪಿನ ಅನುಮತಿ ಪಡೆದಾಗ, ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ರಾಷ್ಟ್ರ ಇದೇ ಫ್ರಾನ್ಸ್.

ಭಾರತವು ನಾಲ್ಕು ದಶಕಗಳಿಂದ ಫ್ರೆಂಚ್ ಯುದ್ಧ ವಿಮಾನಗಳನ್ನು ಖರೀದಿಸುತ್ತಾ ಬಂದಿದೆ. 2015 ರಲ್ಲಿ ‘ಡಸಾಲ್ಟ್ ಏವಿಯೇಷನ್’ನ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗಿತ್ತು. 1980ರ ದಶಕದಲ್ಲಿ ಖರೀದಿಸಲಾಗಿದ್ದ ಮಿರಾಜ್ ಜೆಟ್ಗಳು ವಾಯುಪಡೆಯಲ್ಲಿ ಇನ್ನೂ ಕಾರ್ಯನಿರ್ವಹಿಸುತ್ತಿವೆ.

2005 ರಲ್ಲಿ, ಫ್ರಾನ್ಸ್ನಿಂದ ಆರು ‘ಸ್ಕಾರ್ಪೀನ್’ ಡೀಸೆಲ್ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲಾಗಿತ್ತು. ಇದನ್ನು ಭಾರತದಲ್ಲಿ ’ಮಝಗಾನ್ ಡಾಕ್ ಶಿಪ್ಬಿಲ್ಡರ್ (ಎಂಡಿಎಲ್)‘ ಸಂಸ್ಥೆ ಫ್ರಾನ್ಸ್ನ ನೌಕಾಪಡೆ ಸಹಭಾಗಿತ್ವದಲ್ಲಿ ನಿರ್ಮಿಸುತ್ತಿದೆ. ಕೊನೆಯ ಜಲಾಂತರ್ಗಾಮಿ ಮುಂದಿನ ವರ್ಷ ನೌಕಾಪಡೆ ಸೇರಲಿದೆ.

ಭಾರತವು ಇನ್ನೂ ಮೂರು ‘ಸ್ಕಾರ್ಪೀನ್’ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸುವ ನಿರೀಕ್ಷೆಯಿದ್ದು, ಎಂಡಿಎಲ್ ಮತ್ತು ಪ್ರಾನ್ಸ್ನ ನೌಕಾಪಡೆಯೇ ಇವುಗಳನ್ನು ತಯಾರಿಸಲಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಮೂರು ಜಲಾಂತರ್ಗಾಮಿಗಳ ಖರೀದಿ ಒಪ್ಪಂದದ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಅಲ್ಲದೇ, 26 ರಫೇಲ್ ಜೆಟ್ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದು ಗೊತ್ತಾಗಿದೆ.

ಆಗಸ್ಟ್ 2022ರಲ್ಲಿ ಭಾರತದ ನೌಕಾಪಡೆಯ ಸೇವೆಗೆ ನಿಯೋಜಿಸಲಾದ ದೇಶದ ಮೊದಲ ಸ್ವದೇಶಿ ಯುದ್ಧ ವಿಮಾನವಾಹಕಕ್ಕೆ ರಫೇಲ್ ಜೆಟ್ಗಳನ್ನು ನಿಯೋಜಿಸಲು ಉದ್ದೇಶಿಸಲಾಗಿದೆ. ಇವು ಅಮೆರಿಕದ ಎಫ್18ಗಿಂತಲೂ ಹೆಚ್ಚಿನ ಸಾಮರ್ಥ್ಯ ಹೊಂದಿರುವುದು ಕಳೆದ ವರ್ಷ ನಡೆದ ಪರೀಕ್ಷೆ ವೇಳೆ ಸಾಬೀತಾಗಿದೆ.

ಹಿಂದೂ ಮಹಾ ಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯವನ್ನು ಎರಡೂ ದೇಶಗಳೂ ಸೂಕ್ಷ್ಮವಾಗಿ ಗಮನಿಸುತ್ತಿವೆ. ಆದರೆ, ಈ ವಲಯಕ್ಕೆ ಸಂಬಂಧಿಸಿದಂತೆ ರೂಪಿಸಲಾದ ಯೋಜನೆಗಳ ಮಾಹಿತಿ ಹೊರಬಿದ್ದಿಲ್ಲ.

ಮೋದಿ ಫ್ರಾನ್ಸ್ ಭೇಟಿ ವೇಳೆ ಅವರಿಗೆ ಲೌವ್ರೆ ಮ್ಯೂಸಿಯಂನಲ್ಲಿ ಸರ್ಕಾರಿ ಔತಣಕೂಟದ ವ್ಯವಸ್ಥೆ ಮಾಡಲಾಗಿದ್ದು, ಅದರ ಜತೆಗೇ ಮ್ಯಾಕ್ರಾನ್ ಅವರು ಖಾಸಗಿ ಔತಣವನ್ನೂ ಆಯೋಜಿಸಲಿದ್ದಾರೆ. ಮೋದಿ ಅವರು ಹಲವು ರಾಜಕೀಯ ನಾಯಕರು, ಆಯ್ದ ಉದ್ಯಮಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.