ನಾಂದೆಡ್ (ಮಹಾರಾಷ್ಟ್ರ): ಮಹಿಳೆಯರಿಗೆ ಶಿಕ್ಷಣ ಮೊದಲ ಆದ್ಯತೆಯಾಗಬೇಕು ಎಂದು ನವಜಾತ ಶಿಶುವಿನೊಂದಿಗೆ ಬಂದು ದ್ವಿತೀಯ ಪಿಯುಸಿ (12ನೇ ತರಗತಿ) ಪರೀಕ್ಷೆ ಬರೆದ ತಾಯಿಯೊಬ್ಬರು ಹೇಳಿದ್ದಾರೆ.

21 ವರ್ಷದ ಶೀತಲ್ ಚಂದ್ರಕಾಂತ್ ಚಿಟ್ಟೆ ಪರೀಕ್ಷೆ ಬರೆದ ತಾಯಿ. ಶೀತಲ್ ಅವರಿಗಿರುವ ಶಿಕ್ಷಣದ ಮೇಲಿನ ಆಸಕ್ತಿ ಮತ್ತು ದೃಢಸಂಕಲ್ಪಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಶೀತಲ್ ಅವರು ಫೆಬ್ರುವರಿ 10ರಂದು 2 ದಿನಗಳ ಹಿಂದೆ ಜನಿಸಿದ ಶಿಶುವಿನೊಂದಿಗೆ ಬಂದು ಇಂಗ್ಲಿಷ್ ಪರೀಕ್ಷೆ ಬರೆದಿದ್ದರು. ನಿನ್ನೆ (ಬುಧವಾರ) ಪರೀಕ್ಷೆ ಕೇಂದ್ರಕ್ಕೆ ಬಂದು ರಾಜ್ಯಶಾಸ್ತ್ರ ಪರೀಕ್ಷೆ ಬರೆದಿದ್ದಾರೆ. ಈ ವೇಳೆ ಮಗುವನ್ನು ನೋಡಿಕೊಳ್ಳಲು ಶೀತಲ್ ಸಹೋದರಿ ನೆರವಾದರು.

ಬಾಣಂತಿಯೊಬ್ಬರು ಪರೀಕ್ಷೆಗೆ ಹಾಜರಾಗುತ್ತಿರುವುದನ್ನು ತಿಳಿದು ಕಾಲೇಜಿನ ಆಡಳಿತ ಮಂಡಳಿ ವಿಶೇಷ ಸೌಕರ್ಯ ಕಲ್ಪಿಸಿದ್ದು ವೀಶೇಷವಾಗಿತ್ತು.

ಕಾಲೇಜಿನಿಂದ ವಿಶೇಷ ಸೌಕರ್ಯ...

ಶೀತಲ್ ಅವರಿಗಿರುವ ಶಿಕ್ಷಣದ ಮೇಲಿನ ಆಸಕ್ತಿಯನ್ನು ಮೆಚ್ಚಿದ ಪೀಪಲ್ಸ್ ಕಾಲೇಜಿನ ಆಡಳಿತ ಮಂಡಳಿ ‘ತಾಯಿ ಮಿತ್ರ ಕೊಠಡಿ‘ ಎಂಬ ವಿಶೇಷ ಕೊಠಡಿ ವ್ಯವಸ್ಥೆ ಮಾಡಿತ್ತು. ಮಗುವಿಗಾಗಿ ತೊಟ್ಟಿಲನ್ನೂ ಸಹ ಒದಗಿಸಿತು. ಇದರಿಂದ ಶೀತಲ್ ಅವರು, ಮಗು ವಿಶ್ರಾಂತಿ ಪಡೆಯುತ್ತಿರುವ ವೇಳೆ ಸುಗಮವಾಗಿ ಪರೀಕ್ಷೆ ಬರೆಯಲು ಸಾಧ್ಯವಾಯಿತು.

ಪರೀಕ್ಷೆ ವೇಳೆ ವಿದ್ಯಾರ್ಥಿನಿಗೆ ಪ್ರತ್ಯೇಕ ಸೌಲಭ್ಯ ಒದಗಿಸಿದ ಕಾಲೇಜಿನ ಕ್ರಮವನ್ನು ಶಿಕ್ಷಣಾಧಿಕಾರಿ ಮಾಧವ್ ಸಲ್ಗಾರ್ ಪ್ರಶಂಸಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ವಿದ್ಯಾರ್ಥಿನಿಯರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಮಾಡಲಾಗಿದೆ. ಮುಂಬರುವ ದಿನಗಳಲ್ಲೂ ಈ ಯೋಜನೆಯನ್ನು ಮುಂದುವರಿಸಲಾಗುವುದು. ವಿದ್ಯಾರ್ಥಿನಿ ಶೀತಲ್ ಅವರ ನಡೆ ಮಾದರಿಯಾಗಿದೆ ಎಂದು ಮಹಾರಾಷ್ಟ್ರ ಪರೀಕ್ಷೆ ಮಂಡಳಿಯ ಲಾತೂರ್ ವಿಭಾಗೀಯ ಅಧ್ಯಕ್ಷ ಸುಧಾಕರ್ ತೆಲಂಗ್ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ವಿವಾಹವಾಗಿರುವ ಶೀತಲ್, ಇಲ್ಲಿನ ಸ್ಥಳೀಯ ಕಾಲೇಜಿನಲ್ಲಿ ಓದುತ್ತಿದ್ದಾರೆ.

ಮದುವೆಯಾಯ್ತು, ಮಗುವಾಯ್ತು ಎಂಬ ಕಾರಣಕ್ಕೆ ಶಿಕ್ಷಣವನ್ನು ಮೊಟಕುಗೊಳಿಸುವುದು ಸರಿಯಲ್ಲ ಎಂದು ಶೀತಲ್ ಹಲವರಿಗೆ ಕಿವಿಮಾತು ಹೇಳಿದ್ದಾರೆ. ವೈಯಕ್ತಿವಾಗಿ ನನ್ನ ಭವಿಷ್ಯಕ್ಕೆ ಪಿಯುಸಿ ಪರೀಕ್ಷೆ ಅತ್ಯಂತ ಮಹತ್ವದ್ದಾಗಿದೆ. ಮಗುವಿನ ನೆಪವೊಡ್ಡಿ ಪರೀಕ್ಷೆ ಬರೆಯುವುದನ್ನು ನಾನು ಕೈಬಿಡಲಿಲ್ಲ ಎಂದರು. ನನಗೆ ಶಿಕ್ಷಣ ಮುಂದುವರಿಸಲು ಕುಟುಂಬದ ಸಂಪೂರ್ಣ ಬೆಂಬಲ ಇದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.