ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ಮೆಟ್‌ ಧರಿಸದೆ ಬೈಕ್‌ ಸವಾರಿ; ಅಮಿತಾಭ್‌, ಅನುಷ್ಕಾ ಶರ್ಮಾ ವಿರುದ್ಧ ಕೇಸ್‌!

Published 16 ಮೇ 2023, 16:14 IST
Last Updated 16 ಮೇ 2023, 16:14 IST
ಅಕ್ಷರ ಗಾತ್ರ

ಮುಂಬೈ : ಹೆಲ್ಮೆಟ್ ಧರಿಸದೆ ಬೈಕ್‌ನಲ್ಲಿ ಹಿಂಬದಿ ಸವಾರಿ ಮಾಡಿದ ಬಾಲಿವುಡ್‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮತ್ತು ನಟಿ ಅನುಷ್ಕಾ ಶರ್ಮಾ ಅವರ ಮೇಲೆ ಮುಂಬೈ ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆ ಮೂಲಕ ಸಂಚಾರಿ ನಿಯಮವನ್ನು ಯಾರೇ ಉಲ್ಲಂಘಿಸಿದರೂ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುಟ್ಟಿ ಎಂಬ ಸಂದೇಶ ರವಾನಿಸಿದ್ದಾರೆ.‌

ಸೋಮವಾರ ಟ್ರಾಫಿಕ್‌ ಜಾಮ್‌ನಿಂದ ತಪ್ಪಿಸಿಕೊಳ್ಳಲು ಅಭಿಮಾನಿಯೊಬ್ಬರ ಬೈಕ್‌ನಲ್ಲಿ ಕುಳಿತು ಶೂಟಿಂಗ್‌ ಸ್ಥಳಕ್ಕೆ ತಲುಪಿದ್ದರ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಮಿತಾಭ್‌ ಬಚ್ಚನ್‌ ಪೋಸ್ಟ್‌ ಹಾಕಿದ್ದರು. ಈ ವೇಳೆ ಲಿಫ್ಟ್‌ ಕೊಟ್ಟ ಅಭಿಮಾನಿಗೆ ಧನ್ಯವಾದ ಹೇಳಿದ್ದರು. ಹಾಗೆಯೇ ಅನುಷ್ಕಾ ಶರ್ಮಾ ತಮ್ಮ ಸಹದ್ಯೋಗಿಯ ಬೈಕ್‌ನಲ್ಲಿ ಸವಾರಿ ಮಾಡಿರುವುದರ ಬಗ್ಗೆಯೂ ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದೀಗ ಇಬ್ಬರಿಗೂ ತಾಪತ್ರಯ ತಂದಿದೆ.

ಅಮಿತಾಭ್‌ ಬಚ್ಚನ್‌ ಮತ್ತು ಅನುಷ್ಕಾ ಶರ್ಮಾ ಅವರು ಹೆಲ್ಮೆಟ್‌ ಧರಿಸದೆ ಬೈಕ್‌ ಸವಾರಿ ಮಾಡಿರುವ ಬಗ್ಗೆ ಹಲವಾರು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಸಾಮಾನ್ಯರಿಗೊಂದು ನಿಯಮ, ಸ್ಟಾರ್‌ಗಳಿಗೊಂದು ನಿಯಮವೇ? ಎಂದು ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಂಬೈ ಪೊಲೀಸರು, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಾಂತಾಕ್ರೂಜ್‌ ಸಂಚಾರಿ ವಿಭಾಗಕ್ಕೆ ಎಚ್ಚರಿಸಲಾಗಿದೆ ಎಂದು ತಿಳಿಸಿದ್ದಾರೆ.

1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129ರ ಪ್ರಕಾರ ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಓಡಿಸಿದರೆ ಅದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ನಿಯಮ ಉಲ್ಲಂಘಿಸಿದವರಿಗೆ 1 ಸಾವಿರ ರೂಪಾಯಿ ದಂಡ ಜೊತೆಗೆ ತಾತ್ಕಾಲಿಕವಾಗಿ ಚಾಲನಾ ಪರವಾನಗಿಯನ್ನು ರದ್ದುಪಡಿಸಲಾಗುತ್ತದೆ. ಕೆಲವೊಂದು ಕ್ಲಿಷ್ಟಕರ ಪ್ರಕರಣಗಳಲ್ಲಿ ಸೆರೆ ವಾಸವನ್ನು ಅನುಭವಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT