ಮುಂಬೈ: ವಿದೇಶಗಳಲ್ಲಿ ಉದ್ಯೋಗದ ಭರವಸೆ ನೀಡಿ ಉದ್ಯೋಗಾಂಕ್ಷಿಗಳನ್ನು ವಂಚಿಸುತ್ತಿದ್ದ 9 ಸಂಸ್ಥೆಗಳ ಮೇಲೆ ಮುಂಬೈ ಸಿಸಿಬಿ ಪೊಲೀಸರು ಹಾಗೂ ವಿದೇಶಾಂಗ ಇಲಾಖೆಯ ವಲಸೆ ಅಧಿಕಾರಿಗಳು ನಿನ್ನೆ ದಾಳಿ ಮಾಡಿದ್ದಾರೆ.

ದಾಳಿಯ ವೇಳೆ ಸಂಸ್ಥೆಗಳಿಂದ ಹಲವು ಅಕ್ರಮ ಚಟುವಟಿಕೆಗಳು ಪತ್ತೆಯಾಗಿದ್ದು 258 ಭಾರತೀಯ ವ್ಯಕ್ತಿಗಳಿಗೆ ನೀಡಿದ ನಕಲಿ ನೇಮಕಾತಿ ಪತ್ರಗಳು, ಐಡಿ ಕಾರ್ಡುಗಳು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಎಲ್ಲ 9 ಕಂಪನಿಗಳ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ಮಾಡಲಾದ ಸಂಸ್ಥೆಗಳ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಆರೋಪಿತರು 1983ರ ವಲಸೆ ಕಾಯ್ದೆ ಉಲ್ಲಂಘಿಸಿ ಭಾರತೀಯ ನಾಗರಿಕ ಉದ್ಯೋಗಾಂಕ್ಷಿಗಳನ್ನು ವಿದೇಶಕ್ಕೆ ಕಳುಹಿಸುತ್ತಿದ್ದರು. ವಿದೇಶದಲ್ಲಿ ಉದ್ಯೋಗ ಬಯಸುವವರು ಇಂತಹ ಸಂಸ್ಥೆಗಳಿಂದ ಎಚ್ಚರದಿಂದ ಇರಬೇಕು ಎಂದು ಅವರು ಹೇಳಿದ್ದಾರೆ.
.ಭಾರತಕ್ಕೆ ಆಗಮಿಸಿದ ವ್ಲಾದಿಮಿರ್ ಪುಟಿನ್: ಆತ್ಮೀಯವಾಗಿ ಸ್ವಾಗತಿಸಿದ ಪ್ರಧಾನಿ ಮೋದಿ.ಭಾರತಕ್ಕೆ ಇಂದು ಪುಟಿನ್ ಭೇಟಿ: ಯುದ್ಧೋಪಕರಣಗಳ ತ್ವರಿತ ಪೂರೈಕೆ ಕುರಿತು ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.