ಪಟನಾ: ನಾವು ನಮ್ಮ ದೇಶಕ್ಕೆ ಬದ್ಧರಾಗಿರಬೇಕು.1947ಕ್ಕಿಂತ ಮುನ್ನ ಮುಹಮ್ಮದ್ ಅಲಿ ಜಿನ್ನಾ ಇಸ್ಲಾಂ ರಾಷ್ಟ್ರಕ್ಕೆ ಬೇಡಿಕೆಯೊಡ್ಡಿದ್ದರು. ನಮ್ಮ ಹಿರಿಯರು ಮಾಡಿದ ದೊಡ್ಡ ಅಚಾತುರ್ಯಕ್ಕೆ ನಾವು ಇಂದು ಬೆಲೆ ತೆರುತ್ತಿದ್ದೇವೆ. ಈ ಹೊತ್ತಲ್ಲಿ ನಾವು ಇಲ್ಲಿರುವ ಮುಸ್ಲಿಂ ಬಾಂಧವರನ್ನು ಅಲ್ಲಿಗೆ ಕಳುಹಿಸಿ ಅಲ್ಲಿರುವ ಹಿಂದೂಗಳನ್ನು ಇಲ್ಲಿಗೆ ಕರೆ ತರುತ್ತಿದ್ದರೆಈ ಪರಿಸ್ಥಿತಿ ಬರುತ್ತಿರಲಿಲ್ಲ. ಭಾರತೀಯರಿಗೆ ಇಲ್ಲಿ ನೆಲೆ ಸಿಗದೇ ಇದ್ದರೆ ಅವರು ಹೋಗುವುದಾದರೂ ಎಲ್ಲಿಗೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ಹೇಳಿದ್ದಾರೆ.

ಬುಧವಾರ ಬಿಹಾರದ ಪೂರ್ಣಿಯಾದಲ್ಲಿ ಮಾತನಾಡಿದ ಅವರು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಕಿಡಿಕಾರಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ 2015ಕ್ಕಿಂತ ಮುಂಚೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದ ಮುಸ್ಲಿಮೇತರ ಶರಣಾರ್ಥಿಗಳಿಗೆ ಪೌರತ್ವ ನೀಡಲಾಗುತ್ತದೆ. ನಮ್ಮ ನೆರೆ ರಾಷ್ಟ್ರಗಳಲ್ಲಿ ಧಾರ್ಮಿಕ ದೌರ್ಜನ್ಯಗೊಳಗಾದವರಿಗೆ ಸಹಾಯ ಮಾಡಲು ಈ ಕಾನೂನು ಅಗತ್ಯವಾಗಿದೆ ಎಂದಿದ್ದಾರೆ ಸಚಿವರು.

ಇದನ್ನೂ ಓದಿ:ವಾರಿಸ್ ಪಠಾಣ್ನ ಬೆದರಿಕೆಗಳು ಭಾರತದಲ್ಲಿ ನಡೆಯುವುದಿಲ್ಲ:ಬಿಜೆಪಿ ಟ್ವೀಟ್

ಉತ್ತರ ಪ್ರದೇಶದ ಇಸ್ಲಾಮಿಕ್ ಸಂಸ್ಥೆ ದೇವ್‌ಬಂದ್‌ನ್ನು ಭಯೋತ್ಪಾದನೆಯ ಗಂಗೋತ್ರಿ ಎಂದು ಹೇಳಿ ವಿವಾದಕ್ಕೀಡಾಗಿದ್ದ ಗಿರಿರಾಜ್ ಸಿಂಗ್ ಅವರಿಗೆ ನಾಲ್ಕು ದಿನಗಳ ಹಿಂದೆಯಷ್ಟೇ ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಸಮನ್ಸ್ ಕಳುಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.