ಬೆಂಗಳೂರು: ಮಹಾರಾಷ್ಟ್ರದ ಮರಾಠಾವಾಡದ ನಾಂದೇಡ್ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯ ಡಾ, ಸಂತುಕ್ರಾವ್ ಹಂಬರ್ಡೆ (Santuk Hambarde) ಅವರು ವಿಜಯಶಾಲಿಯಾಗಿದ್ದಾರೆ.

ಕಾಂಗ್ರೆಸ್ನ ರವೀಂದ್ರ ಚೌಹಾಣ್ ಅವರರನ್ನು ಹಂಬರ್ಡೆ ಅವರು 39,365 ಮತಗಳ ಅಂತರದಿಂದ ಮಣಿಸಿದ್ದಾರೆ.

ಕಣದಲ್ಲಿ ವಿಬಿಎ ಪಕ್ಷದ ಅವಿನಾಶ್ ಬೋಸಿಕರ್ (3ನೇ ಸ್ಥಾನ) ಸೇರಿದಂತೆ 23 ಜನ ಇದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ವಸಂತರಾವ್ ಚೌಹಾಣ್ ಅವರು 60 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಸಂಸದರಾಗಿದ್ದರು. ಆದರೆ ಆಗಸ್ಟ್ನಲ್ಲಿ ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ತೆರವಾಗಿದ್ದ ಈ ಕ್ಷೇತ್ರಕ್ಕೆ ನವೆಂಬರ್ 20 ರಂದು ಉಪ ಚುನಾವಣೆ ನಡೆದಿತ್ತು.

ವಸಂತರಾವ್ ಅವರ ಮಗ ರವೀಂದ್ರ ಚೌಹಾಣ್ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ಅನುಕಂಪ ಅವರ ಕೈ ಹಿಡಿಯಲಿಲ್ಲ.

ವೃತ್ತಿಯಲ್ಲಿ ವೈದ್ಯರಾಗಿರುವ ನಾಂದೇಡ್ ನೂತನ ಸಂಸದ ಸಂತುಕ್ರಾವ್ ಹಂಬರ್ಡೆ ಅವರು ನಾಂದೇಡ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮೋಹನ್ ಹಂಬರ್ಡೆ ಅವರ ಸಹೋದರನಾಗಿದ್ದಾರೆ.

ಈ ಮೂಲಕ ಲೋಕಸಭೆಯಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್ ಕಳೆದುಕೊಂಡಂತಾಗಿದೆ.
.ಇನ್ಸ್ಟಾಗ್ರಾಂನಲ್ಲಿ 56 ಲಕ್ಷ ಫಾಲೋವರ್ಸ್.. ಚುನಾವಣೆಯಲ್ಲಿ ಗಳಿಸಿದ್ದು 137 ಮತ!.ಮಹಾರಾಷ್ಟ್ರ ಚುನಾವಣೆ: ಹತ್ಯೆಯಾದ ಬಾಬಾ ಸಿದ್ದಿಕಿ ಮಗನಿಗೆ ಮುಂಬೈನಲ್ಲಿ ಸೋಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.