ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

TOP 10 News | ಈ ದಿನದ ಪ್ರಮುಖ 10 ಸುದ್ದಿಗಳು: 25 ಸೆಪ್ಟೆಂಬರ್‌ 2023

Published 25 ಸೆಪ್ಟೆಂಬರ್ 2023, 15:51 IST
Last Updated 25 ಸೆಪ್ಟೆಂಬರ್ 2023, 15:51 IST
ಅಕ್ಷರ ಗಾತ್ರ
Introduction

ಸರ್ಕಾರ ಕಾವೇರಿ ಹೋರಾಟವನ್ನು ಹತ್ತಿಕ್ಕುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ, ಅಸ್ತಿತ್ವಕ್ಕಾಗಿ BJP ನಾಯಕರ ಕಾಲಿಗೆ ಬಿದ್ದ ಕುಮಾರಸ್ವಾಮಿ: ಪ್ರಿಯಾಂಕ್ ಖರ್ಗೆ,ಪಿಎಸ್ಐ ನೇಮಕಾತಿ ಹಗರಣ: ಐಪಿಎಸ್ ಅಧಿಕಾರಿ ಅಮೃತ್ ಪೌಲ್‌ಗೆ ಜಾಮೀನು ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ

1

ಸರ್ಕಾರ ಕಾವೇರಿ ಹೋರಾಟವನ್ನು ಹತ್ತಿಕ್ಕುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ

‘ಬಂದ್‌, ಪ್ರತಿಭಟನೆ ನಡೆಸುವ ರೈತರು ಮತ್ತು ಕನ್ನಡ ಹೋರಾಟಗಾರರ ಹಕ್ಕನ್ನು ನಾನು ಗೌರವಿಸುತ್ತೇನೆ. ಅವರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ನಮ್ಮ ಸರ್ಕಾರ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

2

ಅಸ್ತಿತ್ವಕ್ಕಾಗಿ BJP ನಾಯಕರ ಕಾಲಿಗೆ ಬಿದ್ದ ಕುಮಾರಸ್ವಾಮಿ: ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ

'ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ದೆಹಲಿಗೆ ಹೋಗಿ, ಅಲ್ಲಿನ ಬಿಜೆಪಿ ನಾಯಕರ ಕಾಲು ಬಿದ್ದಿದ್ದಾರೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

3

ಬೆಂಗಳೂರು ಬಂದ್: ಸಾಮಾಜಿಕ ಜಾಲತಾಣಗಳಲ್ಲಿ #ಕಾವೇರಿನಮ್ಮದು ಟ್ರೆಂಡಿಂಗ್

ಚಿತ್ರಕೃಪೆ:ಸಾಮಾಜಿಕ ಜಾಲತಾಣ ಎಕ್ಸ್‌

ಚಿತ್ರಕೃಪೆ:ಸಾಮಾಜಿಕ ಜಾಲತಾಣ ಎಕ್ಸ್‌ 

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನಿರ್ವಹಣಾ ಮಂಡಳಿ ನೀಡಿರುವ ಆದೇಶವನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ‘ಕಾವೇರಿ ನಮ್ಮದು‘ ಎಂಬ ಅಭಿಯಾನಕ್ಕೆ ಕರೆ ನೀಡಲಾಗಿದೆ. ಈಗಾಗಲೇ #ಕಾವೇರಿನಮ್ಮದು ಎಂಬ ಹ್ಯಾಶ್‌ ಟ್ಯಾಗ್ ಭಾರಿ ಟ್ರೆಂಡ್‌ ಆಗುತ್ತಿದೆ.

4

ಪಿಎಸ್ಐ ನೇಮಕಾತಿ ಹಗರಣ: ಐಪಿಎಸ್ ಅಧಿಕಾರಿ ಅಮೃತ್ ಪೌಲ್‌ಗೆ ಜಾಮೀನು

ಅಮೃತ್ ಪೌಲ್‌

ಅಮೃತ್ ಪೌಲ್‌

ಪಿಎಸ್ಐ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್‌ಗೆ ಸೋಮವಾರ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

5

ಬೆಂಗಳೂರು ಬಂದ್ ನಾಳೆ: ಏನಿರುತ್ತೆ ? ಏನಿರಲ್ಲ ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೋರಾಟದ ಕಾವು ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದೆ.

6

ಎನ್‌ಡಿಎ ತೊರೆದ ಎಐಎಡಿಎಂಕೆ: ಬಿಜೆಪಿ ನಾಯಕರ ನಡೆ ವಿರುದ್ಧ ಪಕ್ಷ ಕಿಡಿ

ಎಡಪ್ಪಾಡಿ ಕೆ. ಪಳನಿಸ್ವಾಮಿ

ಎಡಪ್ಪಾಡಿ ಕೆ. ಪಳನಿಸ್ವಾಮಿ

ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದೊಂದಿಗಿನ ನಾಲ್ಕು ವರ್ಷಗಳ ಮೈತ್ರಿಯಿಂದ ಹೊರ ಬಂದಿರುವುದಾಗಿ ಎಐಎಡಿಎಂಕೆ ಸೋಮವಾರ ಹೇಳಿದೆ. 2024ರ ಲೋಕಸಭಾ ಚುನಾವಣೆಯನ್ನು ಪ್ರತ್ಯೇಕವಾಗಿ ಎದುರಿಸಲು ಯೋಜನೆ ರೂಪಿಸಲಾಗುವುದು ಎಂದು ಪಕ್ಷ ಹೇಳಿದೆ.

7

ಕಾಂಗ್ರೆಸ್‌ ಜತೆ ಮೈತ್ರಿ ಬಗ್ಗೆ ಶೀಘ್ರ ನಿರ್ಧಾರ ಎಂದ ವೈ.ಎಸ್‌. ಶರ್ಮಿಳಾ

ವೈ.ಎಸ್‌. ಶರ್ಮಿಳಾ

ವೈ.ಎಸ್‌. ಶರ್ಮಿಳಾ

 ‘ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಕುರಿತು ಈ ತಿಂಗಳಾಂತ್ಯದೊಳಗೆ ನಿರ್ಧರಿಸಲಾಗುವುದು‘ ಎಂದು ವೈಎಸ್‌ಆರ್‌ ತೆಲಂಗಾಣ ಪಕ್ಷದ ಸಂಸ್ಥಾಪಕಿ ವೈ.ಎಸ್‌. ಶರ್ಮಿಳಾ ಅವರು ಸೋಮವಾರ ಹೇಳಿದ್ದಾರೆ.

8

3 ಡಿಸಿಎಂ ಹುದ್ದೆ: ಹೇಳಿಕೆ ನೀಡದಂತೆ ಕೆ.ಎನ್. ರಾಜಣ್ಣಗೆ ಸುರ್ಜೆವಾಲಾ ಸೂಚನೆ

ಕೆ.ಎನ್. ರಾಜಣ್ಣ

ಕೆ.ಎನ್. ರಾಜಣ್ಣ

‘ಕರ್ನಾಟಕದಲ್ಲಿ ಮತ್ತೆ ಮೂರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಹೇಳಿಕೆ ನೀಡಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣ ಜತೆಗೆ ನಾನು ಮಾತನಾಡಿದ್ದೇನೆ. ಈ ವಿಷಯದ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ಹೇಳಿದ್ದೇನೆ’ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ತಿಳಿಸಿದರು. 

9

ಬಿಧೂಢಿ ನಿಂದನೆಯು ನಿಶ್ಚಿತ ಕಾರ್ಯತಂತ್ರದ ಭಾಗ– ಎಎಪಿ

ಸೌರಭ್‌ ಭಾರದ್ವಾಜ್

ಸೌರಭ್‌ ಭಾರದ್ವಾಜ್

‘ಬಿಎಸ್‌ಪಿ ಸಂಸದ ಡ್ಯಾನಿಶ್‌ ಅಲಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ದ ಸಂಸದ ರಮೇಶ್‌ ಬಿಧೂಢಿ ಪರವಾಗಿ ಇಡೀ ಬಿಜೆಪಿಯೇ ನಿಂತಿದೆ. ಇಂಥ ಪದ ಬಳಕೆ ನಿಶ್ಚಿತ ಕಾರ್ಯತಂತ್ರದ ಭಾಗವೇ ಆಗಿದೆ’ ಎಂದು ಎಎಪಿ ನಾಯಕ ಸೌರಭ್‌ ಭಾರದ್ವಾಜ್ ಹೇಳಿದರು.

10

20ನೇ ತಿಂಗಳಿಗೆ ಕಾಲಿಟ್ಟ ರಷ್ಯಾ–ಉಕ್ರೇನ್‌ ಯುದ್ಧ!

ಉಕ್ರೇನ್‌ ಸೈನಿಕರ ಯುದ್ಧ ತಾಲೀಮು (ಎಎಫ್‌ಪಿ ಚಿತ್ರ)
ಉಕ್ರೇನ್‌ ಸೈನಿಕರ ಯುದ್ಧ ತಾಲೀಮು (ಎಎಫ್‌ಪಿ ಚಿತ್ರ)

ಉಕ್ರೇನ್‌ ವಿರುದ್ಧ ರಷ್ಯಾದ ಯುದ್ಧ 20ನೇ ತಿಂಗಳಿಗೆ ಕಾಲಿಟ್ಟಿದ್ದು, ಕೆರೊಸೊನ್‌ ಪ್ರಾಂತ್ಯದ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದು, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.