ಯುವ ಪೀಳಿಗೆಗೆ ಸೃಜನಶೀಲತೆ, ಸ್ವಂತಿಕೆ ಮತ್ತು ಸ್ವಯಂ ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 'ಧೈ ಅಕ್ಷರ' ವತಿಯಿಂದ ರಾಷ್ಟ್ರಮಟ್ಟದ ಪತ್ರ ಬರವಣಿಗೆ ಸ್ಪರ್ಧೆ ಆಯೋಜಿಸಿದೆ.

ಅರ್ಥಪೂರ್ಣ ಶಬ್ದಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪ್ರೇರಣೆ ನೀಡುವುದರ ಜೊತೆಗೆ ಬರವಣಿಗೆ ಕೌಶಲ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಎಂದು ಪೋಸ್ಟ್ ಮಾಸ್ಟರ್ ಜನರಲ್ ಕೃಷ್ಣ ಕುಮಾರ್ ಹೇಳಿದ್ದಾರೆ.

ಯೋಜನೆಯ ಸೂಚನೆಗಳು ಹೀಗಿವೆ:

ಭಾಗವಹಿಸುವವರು ನೀಡಿರುವ ವಿಷಯದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಪತ್ರವನ್ನು ಸಂಬಂಧಿತ ಮುಖ್ಯ ಪೋಸ್ಟ್ಮಾಸ್ಟರ್ ಜನರಲ್ಗೆ ಬರೆಯುತ್ತಾರೆ, ಅವರು ಶಾರ್ಟ್ಲಿಸ್ಟ್ ಮಾಡಿದರೆ ನಗದು ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ, ಮೊದಲು ರಾಜ್ಯ ಮಟ್ಟದಲ್ಲಿ ಮತ್ತು ನಂತರ ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಮಾಡಲಾಗುತ್ತದೆ.

ಬರೆದ ಪತ್ರವನ್ನು ಲಕೋಟೆ ಅಥವಾ ಅಂಚೆ ಕಾರ್ಡ್ಗಳ ಮೂಲಕ ಮಾತ್ರ ಕಳುಹಿಸಲು ಅವಕಾಶ.

18 ವರ್ಷ ಅಥವಾ ಅದಕ್ಕಿಂತ ಮೇಲ್ಟಟ್ಟವರಿಗೆ ಪತ್ರ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಇಂಗ್ಲಿಷ್, ಹಿಂದಿ ಅಥವಾ ಯಾವುದೇ ಸ್ಥಳೀಯ ಭಾಷೆಯಲ್ಲಿ 500ರಿಂದ 1000 ಪದಗಳಲ್ಲಿ ಕೈಬರಹವನ್ನು ಪತ್ರದ ಮೂಲಕ ಕಳುಹಿಸಬಹುದು.

ಸ್ಪರ್ಧೆಯಲ್ಲಿ ಭಾಗವಹಿಸುವವರ ಪೂರ್ಣ ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಮತ್ತು ಶಾಲೆ/ಕಾಲೇಜು ಹೆಸರನ್ನು ಒಳಗೊಂಡಿರಬೇಕು.

ಇದೇ ಡಿ. 8ರೊಳಗೆ ಆಯಾ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ಗೆ ನೀವು ಬರೆದ ಪತ್ರವನ್ನು ಕಳುಹಿಸಬೇಕು.

ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಪತ್ರಗಳಿಗೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ.

ಸ್ಪರ್ಧೆಯ ವಿಜೇತರಿಗೆ ರಾಜ್ಯ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ಮೂರು ಬಹುಮಾನಗಳನ್ನು ನೀಡಲಾಗುವುದು. ಆಯ್ಕೆಯಾದ ಅತ್ಯುತ್ತಮ ಪತ್ರಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ₹25,000, ₹10,000 ಮತ್ತು ₹5,000 ನೀಡಲಾಗುತ್ತದೆ.

ರಾಷ್ಟ್ರೀಯ ಮಟ್ಟದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿ ಆಯ್ಕೆಯಾದ ಅತ್ಯುತ್ತಮ ಪತ್ರಗಳಿಗೆ ₹50,000 , ₹25,000 ಮತ್ತು ₹10,000 ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಪೋಸ್ಟ್ ಮಾಸ್ಟರ್ ಜನರಲ್ ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ :https://www.indiapost.gov.in/api/documents/file/U2FsdGVkX1-4QwWi8dSOZVLOxhv_ehYXFddJ5nDVD19xsHjD5zAnOdtKHZqIXexhewAkz6fByDiulJnqD4x7xA

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.