ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೋ–ಪಾಕ್ ಕದನದ ವೇಳೆ ಮುಳುಗಡೆಯಾಗಿದ್ದ ಯುದ್ಧನೌಕೆಗೆ ಕಡಲಾಳದಲ್ಲಿ ಗೌರವಾರ್ಪಣೆ!

Last Updated 14 ಫೆಬ್ರುವರಿ 2023, 12:54 IST
ಅಕ್ಷರ ಗಾತ್ರ

ನವದೆಹಲಿ: 1971ರ ಇಂಡೋ–ಪಾಕ್ ಕದನದ ವೇಳೆ ಸಮುದ್ರದಲ್ಲಿ ಮುಳುಗಡೆಯಾಗಿದ್ದ ಭಾರತದ ಯುದ್ಧನೌಕೆ ‘ಐಎನ್‌ಎಸ್‌ ಖುಕ್ರಿ’ಗೆ ಕಡಲಾಳದಲ್ಲಿ ಗೌರವಾರ್ಪಣೆ ಮಾಡಲಾಗಿದೆ.

ಸಮುದ್ರ ಗರ್ಭ ಸೇರಿರುವ ನೌಕೆಯ ಬಳಿಗೆ ಫೆ. 11ರ ಭಾನುವಾರ ತಲುಪಿದ್ದ ಭಾರತದ ನೌಕಾದಳದ ಮುಳುಗು ತಜ್ಞರು ನೌಕೆಯ ಅವಶೇಷಗಳಿಗೆ ಪುಷ್ಪ ನಮನ ಸಲ್ಲಿಸಿದ್ದರು. ಈ ಚಿತ್ರಗಳನ್ನು ನೌಕಾಪಡೆಯು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

‘ನೌಕಾಪಡೆಯು ಐಎನ್‌ಎಸ್‌ ಖುಕ್ರಿಯ ಪತನವನ್ನು ಎಂದಿಗೂ ಮರೆಯುವುದಿಲ್ಲ. 1971ರ ಯುದ್ಧದಲ್ಲಿ ನಷ್ಟವಾಗಿದ್ದ ನೌಕೆಯ ವಿಶ್ರಾಂತಿ ಸ್ಥಳಕ್ಕೆ ತೆರಳಿ, ಹೂವಿನ ಮಾಲೆಗಳನ್ನು ಸಮರ್ಪಿಸುವ ಮೂಲಕ ‘ಖುಕ್ರಿ’ ಮತ್ತು ಅದರ ಸಿಬ್ಬಂದಿಯ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಲಾಯಿತು’ ಎಂದು ಭಾರತೀಯ ನೌಕಾಪಡೆ ಟ್ವೀಟ್‌ ಮಾಡಿ ಹೇಳಿದೆ.

ಇಂಡೋ–ಪಾಕ್‌ ಯುದ್ಧದ ವೇಳೆ ಗುಜರಾತ್‌ನ ಡಿಯು ಬಳಿ ಪಾಕಿಸ್ತಾನದ ಜಲಾಂತರ್ಗಾಮಿ ಹಾಂಗೋರ್‌ನ ದಾಳಿಗೆ ಒಳಗಾಗಿದ್ದ ಐಎನ್‌ಎಸ್‌ ಖುಕ್ರಿ, ಸಮುದ್ರದಲ್ಲಿ ಮುಳುಗಡೆಯಾಗಿತ್ತು. 1971ರ ಡಿ. 9ರಂದು ನಡೆದಿದ್ದ ಈ ಘಟನೆಯಲ್ಲಿ ನೌಕೆಯ ಕ್ಯಾಪ್ಟನ್ ಮಹೇಂದ್ರ ನಾಥ್ ಮುಲ್ಲಾ ಸೇರಿದಂತೆ 18 ಅಧಿಕಾರಿಗಳು ಮತ್ತು 176 ಸೈನಿಕರು ಹುತಾತ್ಮಕರಾಗಿದ್ದರು. 6 ಅಧಿಕಾರಿಗಳು ಮತ್ತು 61 ಸೈನಿಕರು ದುರಂತದಲ್ಲಿ ಬದುಕುಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT