ಸುಕ್ಮಾ, ಛತ್ತೀಸಗಢ: ಜಿಲ್ಲೆಯ ಬಂಜಾರ್ಪರಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶನಿವಾರ ಬೆಳಗಿನ ಜಾವ ನಕ್ಸಲ್ ವಿರೋಧಿ ಕಾರ್ಯಾಚರಣೆ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲೀಯ ಮುಖಂಡರೊಬ್ಬರು ಹತರಾಗಿದ್ದಾರೆ.

ಮೃತ ನಕ್ಸಲಿಯನನ್ನು ದುಧಿ ಹೂಂಗಾ (35) ಎಂದು ಗುರುತಿಸಲಾಗಿದೆ. ಈತ ಮಾವೋವಾದಿಗಳ ಕೊಂಟಾ ವಲಯ ಸಮಿತಿಯ ಕಮಾಂಡರ್ ಆಗಿ ಸಕ್ರಿಯನಾಗಿದ್ದನು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಈತ 16 ಪ್ರಕರಣಗಳಲ್ಲಿ ಬೇಕಾಗಿದ್ದನು. ಈತನ ಸುಳಿವು ನೀಡಿದರೆ ₹ 1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಈತನ ಹತ್ಯೆಯೊಂದಿಗೆ ಪ್ರತ್ಯೇಕ ಗುಂಡಿನ ಚಕಮಕಿಗಳಲ್ಲಿ ಈ ವರ್ಷ ಇದುವರೆಗೆ ಸುಮಾರು 105 ನಕ್ಸಲರು ಹತರಾದಂತಾಗಿದೆ’ ಎಂದರು.

ನಿರ್ದಿಷ್ಟ ಪ್ರದೇಶದಲ್ಲಿ ಮಾವೋವಾದಿಗಳ ಕೊಂಟಾ ವಲಯ ಸಮಿತಿಯ ಕಾರ್ಯದರ್ಶಿ ವೆಟ್ಟಿ ಮಂಗ್ದು ಸೇರಿದಂತೆ ನಕ್ಸಲಿಯ ಹಿರಿಯ ನಾಯಕರು ವಾಸ್ತವ್ಯ ಹೂಡಿದ್ದಾರೆ ಎಂಬ ಮಾಹಿತಿ ಆಧರಿಸಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.