ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಇಆರ್‌ಟಿ ಪಠ್ಯಗಳಲ್ಲಿ ಕ್ಯೂಆರ್ ಕೋಡ್‌

Last Updated 22 ಜುಲೈ 2018, 11:34 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ಪಠ್ಯಪುಸ್ತಕಗಳಲ್ಲಿ ಕ್ಯೂಆರ್ ಕೋಡ್‌ ಅನ್ನು ಪರಿಚಯಿಸಲು ಮುಂದಾಗಿದೆ. ಇದರಿಂದಾಗಿ ಪಠ್ಯಗಳನ್ನು ವಿದ್ಯಾರ್ಥಿಗಳು ಚಿತ್ರವೀಕ್ಷಣೆಯ ಮೂಲಕವೂ ಅರ್ಥ ಮಾಡಿಕೊಳ್ಳಬಹುದು ಮತ್ತು ಲ್ಯಾಪ್‌ಟಾಪ್‌ ಮತ್ತು ಇತರೆ ಡಿಜಿಟಲ್‌ ಬೋರ್ಡ್‌ಗಳ ನೆರವಿನಿಂದ ಹೆಚ್ಚುವರಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಕ್ಯೂ ಆರ್‌ ಕೋಡ್‌ಗಳು ಯಂತ್ರ ಓದಬಲ್ಲ ಕೋಡ್‌ಗಳಾಗಿದ್ದು, ಕಪ್ಪು ಮತ್ತು ಬಿಳಿ ಪಟ್ಟಿಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಇದನ್ನು ವೆಬ್‌ ಲಿಂಕ್ ಇಲ್ಲವೇ ಸ್ಮಾರ್ಟ್‌ ಫೋನ್‌ಗಳ ಮೂಲಕ ಸ್ಕ್ಯಾನ್‌ ಮಾಡಿ ಓದಬಹುದು.

‘ಕ್ಯೂ ಆರ್ ಕೋಡ್‌ಗಾಗಿ ನಾವು ವಿಡಿಯೊ, ಅನಿಮೇಷನ್‌, ಪವರ್‌ ಪಾಯಿಂಟ್‌ ಪ್ರಸ್ತುತಿ, ಭೂಪಟಗಳು ಮತ್ತು ಎಲೆಕ್ಟ್ರಾನಿಕ್‌ ವಿಷಯ ಒದಗಿಸುವವರ ಹುಟುಕಾಟದಲ್ಲಿದ್ದೇವೆ’ ಎಂದು ಎನ್‌ಸಿಇಆರ್‌ಟಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಒಂದರಿಂದ 12 ನೇ ತರಗತಿಯ ಪ್ರತಿ ಪಠ್ಯಪುಸ್ತಗಳ ವಿಷಯವನ್ನು ಕ್ಯೂ ಆರ್ ಕೋಡ್‌ನಲ್ಲಿ ಸಿಗುವಂತೆ ಮಾಡಲಾಗುವುದು. ಕೋಡ್‌ ಅನ್ನು ಪಠ್ಯದ ಮೇಲೆ ಮುದ್ರಿಸಲಾಗುತ್ತದೆ’ ಎಂದು ಅವರು ಹೇಳಿದರು.

ಈ ಕೋಡ್‌ಗಳನ್ನು 2019 ರ ಶೈಕ್ಷಣಿಕ ವರ್ಷದಿಂದ ಪ‍ರಿಚಯಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT