ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಸಿದ್ಧಾರ್ಥ್ ಮೇಲೆ ಕೆಂಡ ಕಾರಿದ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ: ಏನಿದು ವಿವಾದ?

ಬ್ಯಾಡ್ಮಿಟನ್ ತಾರೆ ಸೈನಾ ನೆಹವಾಲ್ ಬಗ್ಗೆ ನಟ ಸಿದ್ಧಾರ್ಥ್ ಕೀಳುಮಟ್ಟದ ಟ್ವೀಟ್ ಆರೋಪ
Last Updated 10 ಜನವರಿ 2022, 13:51 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗೆ ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಂಟಾದ ಭದ್ರತಾ ಲೋಪ ದೇಶದಲ್ಲಿ ಬಹುದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಈ ಬಗ್ಗೆ ಹಲವರು ಪರ ವಿರೋಧದ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ.

ಖ್ಯಾತ ಬ್ಯಾಡ್ಮಿಟನ್ ಆಟಗಾರ್ತಿ ಸೈನಾ ನೆಹವಾಲ್ ಅವರು ಈ ಬಗ್ಗೆ ಟ್ವಿಟರ್‌ನಲ್ಲಿ ತಮ್ಮ ಕಾಳಜಿಯನ್ನು ಹಂಚಿಕೊಂಡಿದ್ದರು. ಆದರೆ, ಇದಕ್ಕೆ ಟಾಂಗ್ ಕೊಡಲು ಹೋಗಿ ತಮಿಳು–ತೆಲುಗು ನಟ ಸಿದ್ಧಾರ್ಥ್ ಅವರು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.

ಹೌದು, ಜನವರಿ 5 ರಂದು ಟ್ವೀಟ್ ಮಾಡಿದ್ದ ಸೈನಾ, ‘ತನ್ನ ದೇಶದ ಪ್ರಧಾನಿ ಭದ್ರತೆಯಲ್ಲಿ ಯಾವುದೇ ದೇಶ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ, ಮೊನ್ನೆ ಪ್ರಧಾನಿ ಮೋದಿ ಅವರಿಗೆ ಪಂಜಾಬ್‌ನಲ್ಲಿ ಉಂಟಾದ ಭದ್ರತಾ ಲೋಪವನ್ನು ನಾನು ಕಟುವಾಗಿ ಖಂಡಿಸುತ್ತೇನೆ’ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಟ ಸಿದ್ಧಾರ್ಥ್, ‘Subtle cock champion of the world... Thank God we have protectors of India Same On You Rihanna (Rihanna- ಭಾರತದ ರೈತರ ಪ್ರತಿಭಟನೆಯ ಪರ ಮಾತನಾಡಿ ಸುದ್ದಿಯಾಗಿದ್ದ ಅಮೆರಿಕದ ಪಾಪ್ ಸಿಂಗರ್) ಎಂದು ಕಾಲೆಳೆದಿದ್ದರು. ಸಿದ್ಧಾರ್ಥ್ ಅವರ ಟ್ವೀಟ್‌ಗೆ ಭಾರೀ ವಿರೋಧಗಳು ಕೇಳಿ ಬರುತ್ತಿವೆ.

ಈ ಬಗ್ಗೆ ಕಿಡಿಕಾರಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ‘ಈ ಮನುಷ್ಯನಿಗೆ ಒಂದೆರಡು ಪಾಠಗಳ ಅವಶ್ಯಕತೆ ಇದೆ. ಟ್ವಿಟರ್ ಇಂಡಿಯಾ ಇನ್ನೂ ಯಾಕೆ ಇವರ ಖಾತೆಯನ್ನು ಬ್ಲಾಕ್ ಮಾಡಿಲ್ಲ?’ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಪೊಲೀಸರಿಗೆ ಒತ್ತಾಯಿಸಿದ್ದಾರೆ.

ತಮ್ಮ ಟ್ವೀಟ್ ವಿವಾದ ಹುಟ್ಟುಹಾಕುತ್ತಿದ್ದಂತೆಯೇ ಮತ್ತೊಂದು ಟ್ವೀಟ್ ಮಾಡಿರುವ ಸಿದ್ಧಾರ್ಥ್,‘ಕಾಕ್ ಮತ್ತು ಬುಲ್, ಕೇವಲ ಉಲ್ಲೇಖವಷ್ಟೇ. ಬೇರೆ ರೀತಿ ಓದಿಕೊಳ್ಳುವುದು ಸರಿಯಲ್ಲ. ಅಗೌರವ ಸೂಚಿಸುವ ಯಾವ ಉದ್ದೇಶವೂ ಇಲ್ಲ, ಅಂಥ ಯಾವುದನ್ನೂ ನಾನು ಮಾತನಾಡಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಬಿಜೆಪಿ ನಾಯಕಿ ಹಾಗೂ ನಟಿ ಖುಷ್ಬೂ ಸುಂದರ್ ಸಹ ಸಿದ್ಧಾರ್ಥ್ ಮೇಲೆ ಕಿಡಿಕಾರಿದ್ದಾರೆ. ‘ಸಿದ್, ನೀನು ಒಬ್ಬ ಸ್ನೇಹಿತ. ಖಂಡಿತವಾಗಿಯೂ ನಿನ್ನಿಂದ ಇಂತದ್ದನ್ನು ನಿರೀಕ್ಷಿಸರಲಿಲ್ಲ. ನಿನ್ನ ತಂದೆ–ತಾಯಿ ಇದರಿಂದ ಖುಷಿ ಆಗುವುದಿಲ್ಲ. ದಯವಿಟ್ಟು ದ್ವೇಷ ಹರಡುವ ಕೆಲಸ ಮಾಡಬೇಡ’ ಎಂದಿದ್ದಾರೆ.

ಇನ್ನು ಈ ಬಗ್ಗೆ ಮೌನ ಮುರಿದಿರುವ ಸೈನಾ ನೆಹವಾಲ್ ಕೂಡ ಸಿದ್ಧಾರ್ಥ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.‘ನಟನಾಗಿ ಸಿದ್ಧಾರ್ಥ್ ಅವರನ್ನು ಇಷ್ಟಪಟ್ಟಿದ್ದೆ. ಆದರೆ ಇಂಥದ್ದನ್ನು (ಪ್ರತಿಕ್ರಿಯೆ ಬಗ್ಗೆ) ನಿರೀಕ್ಷಿಸಿರಲಿಲ್ಲ. ಈ ವಿಚಾರವಾಗಿ ಪ್ರತಿಕ್ರಿಯಿಸಲು ಅವರು ಉತ್ತಮವಾದ ಪದಗಳನ್ನು ಬಳಸಬಹುದಿತ್ತು’ ಎಂದು ಸೈನಾ ಹೇಳಿದ್ದಾರೆ.

‘ಅವರು ಯಾವ ಅರ್ಥದಲ್ಲಿ ಹಾಗೆ ಪ್ರತಿಕ್ರಿಯಿಸಿದ್ದಾರೋ ನನಗೆ ತಿಳಿದಿಲ್ಲ. ನಾನವರನ್ನು ನಟನಾಗಿ ಮಾತ್ರ ಇಷ್ಟಪಟ್ಟಿದ್ದೆ. ಆದರೆ ಇದು ಸರಿಯಲ್ಲ. ಇನ್ನಷ್ಟು ಉತ್ತಮ ಪದಗಳೊಂದಿಗೆ ಅವರು ಪ್ರತಿಕ್ರಿಯಿಸಬಹುದಾಗಿತ್ತು. ಉಳಿದದ್ದನ್ನು ಟ್ವಿಟರ್ ಮತ್ತು ನೀವೆಲ್ಲ ಗಮನಿಸಿದ್ದೀರಿ ಎಂದು ಭಾವಿಸುತ್ತೇನೆ’ ಎಂದು ಪ್ರಕಟಣೆಯಲ್ಲಿ ಸೈನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT