ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಪ್ರಮಾಣ ವಚನ: ಸಂತಾಲಿ ಸೀರೆಯಲ್ಲಿ ಮಿಂಚಲಿದ್ದಾರೆ ಹೊಸ ಪ್ರೆಸಿಡೆಂಟ್

Last Updated 24 ಜುಲೈ 2022, 10:54 IST
ಅಕ್ಷರ ಗಾತ್ರ

ಭುವನೇಶ್ವರ: ನೂತನವಾಗಿ ಆಯ್ಕೆಯಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾಂಪ್ರದಾಯಿಕ ಸಂತಾಲಿ ಸೀರೆ ಉಡಲಿದ್ದಾರೆ ಎನ್ನಲಾಗಿದೆ.

ದ್ರೌಪದಿ ಅವರ ಸಂಬಂಧಿ ಸುಕ್ರಿ ತುಡು ಈಗಾಗಲೇ ದೆಹಲಿಗೆ ತೆರಳಿದ್ದು, ಈಶಾನ್ಯ ಭಾರತದಲ್ಲಿ ಸಂತಾಲ್ ಮಹಿಳೆಯರು ಧರಿಸುವ ಸಾಂಪ್ರದಾಯಿಕ ಸೀರೆಯೊಂದನ್ನು ಜತೆಗೆ ಒಯ್ದಿದ್ದಾರೆ.

ಸಂಸತ್ ಭವನದ ಕೇಂದ್ರ ಸಭಾಂಗಣದಲ್ಲಿ ನಡೆಯುವ ನೂತನ ರಾಷ್ಟ್ರಪತಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸುಕ್ರಿ ಮತ್ತು ಅವರ ಪತಿ ಭಾಗವಹಿಸಲಿದ್ದಾರೆ.

ಅಕ್ಕನಿಗಾಗಿ ನಾನೊಂದು ವಿಶೇಷ ಸೀರೆಯನ್ನು ಒಯ್ಯುತ್ತಿದ್ದೇನೆ. ಅದನ್ನವರು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಉಡಬೇಕೆಂದು ನನ್ನ ಕೋರಿಕೆ. ಆದರೆ ರಾಷ್ಟ್ರಪತಿ ಭವನದ ನಿಯಮಗಳ ಪ್ರಕಾರ ಅವರು ವಸ್ತ್ರ ಧರಿಸಬಹುದು ಎಂದುಸುಕ್ರಿ ಹೇಳಿದ್ದಾರೆ.

ಸಂತಾಲ್ ಮಹಿಳೆಯರು ವಿಶೇಷ ಸಂದರ್ಭದಲ್ಲಿ ಸಂತಾಲಿ ಸೀರೆಯನ್ನು ಧರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT