ನವದೆಹಲಿ: ಬ್ರಿಟನ್ ಮೂಲದ ಕೊರಿಯನ್ ಉದ್ಯಮಿ ಎಂದು ಹೇಳಿಕೊಂಡು ಭಾಷಾ ವಿನಿಮಯ ಅಪ್ಲಿಕೇಶನ್ ಮೂಲಕ ದೇಶದಾದ್ಯಂತ 100ಕ್ಕೂ ಹೆಚ್ಚು ಮಹಿಳೆಯರನ್ನು ವಂಚಿಸಿದ ಆರೋಪದ ಮೇಲೆ ಪಶ್ಚಿಮ ದೆಹಲಿಯ ತಿಲಕ್ ನಗರದಲ್ಲಿ 29 ವರ್ಷದ ನೈಜೀರಿಯಾ ಪ್ರಜೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಟೀಫನ್, ಅಲಿಯಾಸ್ ಕೆ. ಸೀ. ಡೊಮಿನಿಕ್ ಅವರನ್ನು ಅವರು ವಾಸವಿದ್ದ ಬಾಡಿಗೆ ಮನೆಯಿಂದ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಡೊಮಿನಿಕ್ ಕಾರ್ಯಾಚರಣಾ ವಿಧಾನವನ್ನು ವಿವರಿಸಿದ ಪೊಲೀಸರು, ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ವಿಶ್ವಾಸ ಗಳಿಸಲು, ಸ್ಥಳೀಯ ಭಾಷಿಕರೊಂದಿಗೆ ಚಾಟ್ ಮಾಡುವ ಮೂಲಕ ಭಾಷೆಗಳನ್ನು ಕಲಿಯಲು ಬಳಸುವ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಏರ್ಪೋರ್ಟ್ನಲ್ಲಿ ವಲಸೆ ವಿಭಾಗದಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಮಹಿಳೆಯರನ್ನು ನಂಬಿಸುತ್ತಿದ್ದ. ಬಳಿಕ, ಆತನ ಸಹಚರರು ಫೋನ್ ಮಾಡಿ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಯರಿಂದ ಹಣಕ್ಕೆ ಬೇಡಿಕೆ ಇಟ್ಟು ಡಿಜಿಟಲ್ ರೂಪದಲ್ಲಿ ವರ್ಗಾಯಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಾನೊಬ್ಬ ಕೊರಿಯಾ ಮೂಲದ ಜುವೆಲ್ಲರಿ ಉದ್ಯಮಿ ಡಕ್ ಯಂಗ್ ಎಂದು ಪರಿಚಯಿಸಿಕೊಂಡಿದ್ದ ಡೊಮಿನಿಕ್, ಬ್ರಿಟನ್ನಲ್ಲಿ ನೆಲೆಸಿರುವುದಾಗಿ ಹೇಳಿದ್ದ. ಮಹಿಳೆಯರಿಗೆ ವೈಯಕ್ತಿಕ ಸಂಬಂಧ ಮತ್ತು ಉದ್ಯಮದ ಪಾಲುದಾರಿಕೆಯ ಆಮಿಷವೊಡ್ಡಿ ಬಲೆಗೆ ಕೆಡವುತ್ತಿದ್ದ ಎಂದು ಡಿಸಿಪಿ ಪ್ರಶಾಂತ್ ಗೌತಮ್ ತಿಳಿಸಿದ್ದಾರೆ.

ಈತನಿಂದ ₹48,500 ಕಳೆದುಕೊಂಡಿರುವುದಾಗಿ ಅಂಜಲಿ ಎಂಬ ಮಹಿಳೆ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಆ್ಯಪ್ನಲ್ಲಿ ಡಕ್ ಯಂಗ್ ಪರಿಚಯವಾಗಿತ್ತು. ಕೆಲ ದಿನಗಳ ಬಳಿಕ ಮೆಡಿಕಲ್ ಕಾರ್ಡ್ ಇಲ್ಲದ ಕಾರಣ ಮುಂಬೈನ ವಲಸೆ ಅಧಿಕಾರಿಗಳು ತಡೆದು ನಿಲ್ಲಿಸಿರುವುದಾಗಿ ಹೇಳಿದ್ದ. ಬಳಿಕ, ವಲಸೆ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ಕೆಲವರು ಆತನನ್ನು ಬಿಡುಗಡೆ ಮಾಡಲು ಹಣ ನೀಡಬೇಕೆಂದು ಕೇಳಿದ್ದರು. ಬಳಿಕ, ಆನ್ಲೈನ್ ಮೂಲಕ ಹಣ ವರ್ಗಾಯಿಸಿದ್ದಾಗಿ ಮಹಿಳೆ ಹೇಳಿದ್ದಾರೆ.

ಯುಪಿಐ ಮೂಲಕ ₹48 ಸಾವಿರ ವರ್ಗಾಯಿಸಿದ ಬಳಿಕ ಮತ್ತೆ ₹2 ಲಕ್ಷಕ್ಕೆ ಬೇಡಿಕೆ ಇಡಲಾಗಿದೆ. ಮಹಿಳೆ ನಿರಾಕರಿಸಿದಾಗ ಎಲ್ಲ ಸಂವಹನವನ್ನು ಕಡಿತ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಶಹದಾರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ವಂಚಕನ ಪತ್ತೆಗೆ ತಂಡ ರಚಿಸಲಾಗಿತ್ತು.

ಕಾಲ್ ರೆಕಾರ್ಡ್, ಬ್ಯಾಂಕ್ ಮಾಹಿತಿ, ಸಾಮಾಜಿಕ ಮಾಧ್ಯಮ ಖಾತೆಗಳ ಮಾಹಿತಿ ವಿಶ್ಲೇಷಿಸಿದ ಬಳಿಕ ಡೊಮಿನಿಕ್ನನ್ನು ಪಶ್ಚಿಮ ದೆಹಲಿಯಿಂದ ಬಂಧಿಸಿದ್ದಾರೆ.

2019ರಲ್ಲಿ 6 ತಿಂಗಳ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದ ನಾನು ವೀಸಾ ಅವಧಿ ಮುಗಿದ ಬಳಿಕವೂ ಇಲ್ಲಿಯೇ ಉಳಿದೆ. ಕೂಡಿಟ್ಟಿದ್ದ ಹಣ ಖಾಲಿಯಾದ ಬಳಿಕ ವಂಚನೆಗೆ ಇಳಿದೆ ಎಂದು ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.