ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾರಿಗೆ ಹೆಚ್ಚಿಗೆ ಸೀಟು ಸಿಗುತ್ತದೊ ಆ ಪಕ್ಷಕ್ಕೆ ಸಿಎಂ ಸ್ಥಾನ: ಶರದ್ ಪವಾರ್

Published 4 ಸೆಪ್ಟೆಂಬರ್ 2024, 13:23 IST
Last Updated 4 ಸೆಪ್ಟೆಂಬರ್ 2024, 13:23 IST
ಅಕ್ಷರ ಗಾತ್ರ

ಕೋಲ್ಹಾಪುರ: ‘ಚುನಾವಣೆಗೆ ಮುನ್ನವೇ ಮಹಾ ವಿಕಾಸ ಆಘಾಡಿಯಾದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಘೋಷಿಸುವ ಅಗತ್ಯವಿಲ್ಲ. ಚುನಾವಣೆ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸಲಾಗುತ್ತದೆ. ಜೊತೆಗೆ ಯಾವ ಪಕ್ಷಕ್ಕೆ ಹೆಚ್ಚು ಸ್ಥಾನ ದೊರೆಯುತ್ತದೆಯೊ ಆ ಪಕ್ಷದವರು ಮುಖ್ಯಮಂತ್ರಿಯಾಗುತ್ತಾರೆ’ ಎಂದು ಎನ್‌ಸಿಪಿ (ಶರದ್‌ ಬಣ) ಮುಖ್ಯಸ್ಥ ಶರದ್‌ ಪವಾರ್‌ ಹೇಳಿದರು.

ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಮೈತ್ರಿಕೂಟದ ನಾಯಕರು ಮಾತುಕತೆ ಮೂಲಕ ಸೀಟು ಹಂಚಿಕೆಯನ್ನು ಆದಷ್ಟುಬೇಗ ಪೂರ್ಣಗೊಳಿಸಬೇಕು ಮತ್ತು ಚುನಾವಣಾ ಪ್ರಚಾರ ಆರಂಭಿಸಬೇಕು. ಇದೇ 7ರಿಂದ 9ರವರೆಗೆ ಮೈತ್ರಿಕೂಟದ ನಾಯಕರ ಸಭೆ ನಡೆಯಲಿದೆ’ ಎಂದರು.

‘ಸಿಪಿಐ, ಸಿಪಿಎಂ, ಪೀಸೆನ್ಟ್ಸ್‌ ಆ್ಯಂಡ್‌ ವರ್ಕರ್ಸ್‌ ಪಾರ್ಟಿ (ಪಿಡ್ಲ್ಯುಪಿ) ಜೊತೆಗೆ ವಿಧಾನಸಭೆ ಚುನಾವಣೆಯಲ್ಲಿಯೂ ಮೈತ್ರಿಕೂಟವು ಹೊಂದಾಣಿಗೆ ಮಾಡಿಕೊಳ್ಳಬೇಕು. ಲೋಕಸಭೆ ಚುನಾವಣೆಯಲ್ಲಿ ನಮ್ಮ ಗೆಲುವಿನಲ್ಲಿ ಈ ಪಕ್ಷಗಳ ಪಾತ್ರವೂ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT