ಚೆನ್ನೈ: ‘ತಮಿಳುನಾಡಿನಲ್ಲಿ ಹಿಂದಿ ಭಾಷೆಗೆ ಈ ಹಿಂದೆಯೂ ಜಾಗ ಇರಲಿಲ್ಲ. ಈಗಲೂ ಇಲ್ಲ. ಮುಂದೆಯೂ ಇರುವುದಿಲ್ಲ’ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ ಹೇಳಿದರು. ಹಿಂದಿ ಹೇರಿಕೆ ವಿರೋಧಿಸಿ ನಡೆದ ಹೋರಾಟದಲ್ಲಿ ಮೃತಪಟ್ಟ ‘ಭಾಷಾ ಹೋರಾಟದ ಹುತಾತ್ಮ’ರ ತ್ಯಾಗವನ್ನು ಅವರು ಕೊಂಡಾಡಿದರು.

‘ಭಾಷಾ ಹುತಾತ್ಮರ ದಿನ’ದ ಅಂಗವಾಗಿ ‘ಎಕ್ಸ್’ನಲ್ಲಿ ಸ್ಟಾಲಿನ್ ಅವರು ವಿಡಿಯೊ ಸಹಿತ ಪೋಸ್ಟ್ ಹಂಚಿಕೊಂಡಿದ್ದಾರೆ. ‘ತಮಿಳುನಾಡು ತನ್ನ ಭಾಷೆಯನ್ನು ಜೀವನಾಡಿಯಾಗಿಸಿಕೊಂಡಿದೆ. ಹಿಂದಿ ಹೇರಿಕೆ ವಿರುದ್ಧ ಇಡೀ ರಾಜ್ಯ ಒಗ್ಗೂಡಿ ಹೋರಾಡಿದೆ, ಪ್ರತಿಭಟಿಸಿದೆ. ಹಿಂದಿ ಹೇರಿಕೆ ಮಾಡಿದಾಗಲೆಲ್ಲ ಇಷ್ಟೇ ತೀವ್ರವಾಗಿ ರಾಜ್ಯ ಪ್ರತಿಕ್ರಿಯಿಸಿದೆ’ ಎಂದರು.

‘ತಮಿಳಿಗಾಗಿ ಪ್ರಾಣ ತ್ಯಾಗ ಮಾಡಿದ ಭಾಷಾ ಹುತಾತ್ಮರಿಗೆ ನಾನು ಗೌರವ ಸಲ್ಲಿಸುತ್ತೇನೆ. ಭಾಷಾ ಯುದ್ಧದಲ್ಲಿ ಇನ್ನುಮುಂದೆ ಯಾರ ಜೀವವೂ ಹೋಗುವುದಿಲ್ಲ; ತಮಿಳು ಕುರಿತು ನಮ್ಮ ಪ್ರೀತಿ ಯಾವತ್ತಿಯೂ ಅಳಿಯುವುದಿಲ್ಲ. ಎಂದೆಂದಿಗೂ ನಾವು ಹಿಂದಿ ಹೇರಿಕೆಯನ್ನು ವಿರೋಧಿಸೋಣ’ ಎಂದು ಜನರಿಗೆ ಕರೆ ನೀಡಿದ್ದಾರೆ.

1965ರಲ್ಲಿ ರಾಜ್ಯದಲ್ಲಿ ನಡೆದ ಹಿಂದಿ ಹೇರಿಕೆ ವಿರೋಧಿ ಹೋರಾಟದ ಕುರಿತ ಇತಿಹಾಸವನ್ನು ವಿವರಿಸುವ ವಿಡಿಯೊವನ್ನು ಸ್ಟಾಲಿನ್ ಹಂಚಿಕೊಂಡಿದ್ದಾರೆ. ಈ ಹೋರಾಟದಲ್ಲಿ ನಾಯಕತ್ವ ವಹಿಸಿದ್ದ ಡಿಎಂಕೆ ಪಕ್ಷದ ಹಿರಿಯರಾದ ಸಿ.ಎನ್. ಅಣ್ಣಾದೊರೈ ಮತ್ತು ಎಂ. ಕರುಣಾನಿಧಿ ಅವರನ್ನೂ ನೆನೆದಿದ್ದಾರೆ.

ಎಐಎಡಿಎಂಕೆ ಮುಖ್ಯಸ್ಥ ಇ.ಕೆ. ಪಳನಿಸ್ವಾಮಿ ಮತ್ತು ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಕೂಡ ಭಾಷಾ ಹೋರಾಟದ ಹುತಾತ್ಮರಿಗೆ ಗೌರವ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.