ನವದೆಹಲಿ:ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತನ್ನ ಲಸಿಕೆ ಕೋವಿಶೀಲ್ಡ್‌ನ ಮುಕ್ತ ಮಾರುಕಟ್ಟೆ ಬೆಲೆ ಪ್ರತಿ ಡೋಸ್‌ಗೆ ₹400 ಎಂದು ಘೋಷಿಸಿದ ಬೆನ್ನಲ್ಲೇ ಹೊಸ ಒಪ್ಪಂದದಲ್ಲಿ ಇದೇ ಬೆಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅನ್ವಯವಾಗಲಿದೆ ಎಂದು ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಆದರ್ ಪೂನವಾಲಾ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರ್ಕಾರಗಳಿಗೆ ಕೋವಿಶೀಲ್ಡ್ ಲಸಿಕೆಯನ್ನು ಪ್ರತಿ ಡೋಸ್‌ಗೆ ₹ 400 ನಂತೆ ಮತ್ತು ಕೇಂದ್ರ ಸರ್ಕಾರಕ್ಕೆ ₹ 150ನಂತೆ ಪೂರೈಸುತ್ತಿರುವ ಬೆಲೆ ವ್ಯತ್ಯಾಸದ ಬಗ್ಗೆ ವಿಪಕ್ಷಗಳು ಪ್ರಶ್ನೆ ಮಾಡಿದ್ದವು.

ವಿವಾದ ಭುಗಿಲೆದ್ದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ಆದರ್ ಪೂನವಾಲಾ, ‘ಇದು ಲಸಿಕೆಯ ಪರಿಣಾಮಕತ್ವದ ಬಗ್ಗೆ ಅರಿವಿಲ್ಲದೆ, ಹಳೆಯ ಒಪ್ಪಂದ ಮೂಲಕ ಕೇಂದ್ರಕ್ಕೆ ನಿಗದಿಪಡಿಸಿದ ರಿಸ್ಕ್ ಶೇರಿಂಗ್ ಬೆಲೆಯಾಗಿದೆ. ಈ ಬಗ್ಗೆ ಎರಡೂ ಕಡೆಯಿಂದ ಸೀಮಿತ ಪ್ರಮಾಣದ ಲಸಿಕೆಗಳಿಗೆ ಒಪ್ಪಂದವಾಗಿದೆ. ಹೊಸ ಒಪ್ಪಂದದಲ್ಲಿ ಕೇಂದ್ರ ಸರ್ಕಾರವೂ ಪ್ರತಿ ಡೋಸ್‌ಗೆ ₹ 400 ಪಾವತಿಸಬೇಕು’ ಎಂದು ಅವರು ಹೇಳಿದ್ದಾರೆ.

‘ಲಸಿಕೆ ದರ ನಿಗದಿಗೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ತಾರತಮ್ಯ ನಡೆಸಲಾಗುತ್ತದೆ. ಇದು ಸಾರ್ವತ್ರಿಕ ಲಸಿಕೆ ಅಭಿಯಾನ ಉದ್ದೇಶ ಈಡೇರಿಕೆಗೆ ತೊಡಕು ಉಂಟಾಗಲು ಕಾರಣವಾಗಿದೆ. ಆದ್ದರಿಂದ ಎಲ್ಲರಿಗೂ ಸಾಮಾನ್ಯ ಲಸಿಕೆ ದರ ಖಚಿತಪಡಿಸುವಂತೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸುತ್ತೇನೆ’ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಟ್ವೀಟ್ ಮಾಡಿದ್ದರು.

‘ಭಾರತದ ಪ್ರಜೆಯಲ್ಲದ ರಾಜ್ಯದ ಪ್ರಜೆಯಾಗಿ ಯಾರಾದರೂ ಇದ್ದಾರೆಯೇ? ಹಾಗಾದರೆ ಲಸಿಕೆ ಕೇಂದ್ರಕ್ಕೆ ₹ 150 ಮತ್ತು ರಾಜ್ಯಕ್ಕೆ ₹ 400 ಏಕೆ? ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಪ್ರಶ್ನಿಸಿದ್ದರು.

ಇದನ್ನೂ ಓದಿ... ಕೋವಿಶೀಲ್ಡ್: 1 ಡೋಸ್‌ಗೆ ರಾಜ್ಯ ಸರ್ಕಾರಕ್ಕೆ ₹400, ಖಾಸಗಿ ಆಸ್ಪತ್ರೆಗಳಿಗೆ ₹600

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.