ಅಪ್ಪ, ಅಮ್ಮ ಇಲ್ಲ, ಆಸ್ತಿಯೂ ಇಲ್ಲ:
ಚುನಾವಣಾ ಆಯೋಗ ನಡೆಸುತ್ತಿರುವ ಈ ಪ್ರಕ್ರಿಯೆಗಳ ಕುರಿತು ಬಾಗಲ್ಪುರದ ನಿವಾಸಿ ನಿಕೇಶ್ ಕುಮಾರ್ ಯಾದವ್ (31) ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ನನ್ನ ಪತ್ನಿ ಈಗ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಂತೆ. ಆದರೆ ಅವರ ತಾಯಿ ಮತ್ತು ತಂದೆ ಇಬ್ಬರೂ ಮೃತಪಟ್ಟಿದ್ದಾರೆ. ಪತ್ನಿ ಅನಕ್ಷರಸ್ಥೆಯಾಗಿದ್ದು, ಯಾವುದೇ ಆಸ್ತಿಯನ್ನೂ ಹೊಂದಿಲ್ಲ. ಹೀಗಿರುವಾಗ ಪೌರತ್ವ ಸಾಬೀತುಪಡಿಸಲು ಇಷ್ಟೆಲ್ಲ ದಾಖಲೆಗಳನ್ನು ಎಲ್ಲಿಂದ ತರುವುದು’ ಎಂದು ಅವರು ಪ್ರಶ್ನಿಸಿದರು.