ನವದೆಹಲಿ: ಸಿಂಧೂ ಜಲ ಒಪ್ಪಂದಕ್ಕೆ ಮಾರ್ಗದರ್ಶಕನ ಸ್ಥಾನದಲ್ಲಿ ಇರುವ ತತ್ವಗಳನ್ನು ಪಾಕಿಸ್ತಾನವು ಗಾಳಿಗೆ ತೂರಿದ್ದರ ಸಹಜ ಪರಿಣಾಮವಾಗಿ ಈ ಒಪ್ಪಂದವನ್ನು ಅಮಾನತಿನಲ್ಲಿ ಇರಿಸುವ ತೀರ್ಮಾನ ಕೈಗೊಳ್ಳಬೇಕಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಂಸತ್ತಿನ ಸಮಿತಿಯೊಂದಕ್ಕೆ ವಿವರಿಸಿದೆ.

ಎಂಜಿನಿಯರಿಂಗ್ ತಂತ್ರಗಳು, ಹವಾಮಾನ ಬದಲಾವಣೆ ಮತ್ತು ನೀರ್ಗಲ್ಲುಗಳ ಕರಗುವಿಕೆ ಸೇರಿದಂತೆ ವಾಸ್ತವ ಪರಿಸ್ಥಿತಿಯಲ್ಲಿನ ಬದಲಾವಣೆಗಳ ಕಾರಣದಿಂದಾಗಿ ಒಪ್ಪಂದದ ಬಗ್ಗೆ ಮರುಚರ್ಚೆ ಅನಿವಾರ್ಯವಾಗಿದೆ ಎಂದು ಅದು ಹೇಳಿದೆ.

ಪಹಲ್ಗಾಮ್ ದಾಳಿಯ ನಂತರದಲ್ಲಿ ಈ ಒಪ್ಪಂದವನ್ನು ಅಮಾನತಿನಲ್ಲಿ ಇರಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ತೀರ್ಮಾನವನ್ನು ಸಮರ್ಥಿಸಿಕೊಳ್ಳುವ ಸಂದರ್ಭದಲ್ಲಿ, ವಿದೇಶಗಳಿಗೆ ತೆರಳಿರುವ ಭಾರತದ ಸಂಸದರ ನಿಯೋಗಗಳು ಈ ಅಂಶವನ್ನೂ ಹೇಳಲಿವೆ ಎಂದು ಮೂಲಗಳು ಹೇಳಿವೆ.

ಸ್ನೇಹ ಮತ್ತು ಸದ್ಭಾವನೆಯ ನೆಲೆಯಲ್ಲಿ 1960ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಈ ತತ್ವವನ್ನು ಪಾಕಿಸ್ತಾನವು ವಾಸ್ತವದಲ್ಲಿ ಅಮಾನತಿನಲ್ಲಿ ಇರಿಸಿತ್ತು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಸಮಿತಿಗೆ ವಿವರಣೆ ನೀಡಿದ್ದಾರೆ.

ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ನಂತರ ಭಾರತ ಕೈಗೊಂಡ ಕ್ರಮಗಳ ಬಗ್ಗೆ ಮಿಸ್ರಿ ಅವರು ಸಂಸತ್ತಿನ ಸಮಿತಿಗೆ ಈಚೆಗೆ ಮಾಹಿತಿ ಒದಗಿಸಿದ್ದಾರೆ. ಅಲ್ಲದೆ, ಪಾಕಿಸ್ತಾನದ ಜೊತೆಗಿನ ಸಂಘರ್ಷದ ನಂತರ ಭಾರತದ ನಿಲುವು ತಿಳಿಸಲು ಐರೋಪ್ಯ ಒಕ್ಕೂಟ ಮತ್ತು 33 ದೇಶಗಳಿಗೆ ಭೇಟಿ ನೀಡುತ್ತಿರುವ ಸಂಸದರ ಏಳು ನಿಯೋಗಗಳ ಜೊತೆ ಕೂಡ ಮಿಸ್ರಿ ಮಾತುಕತೆ ನಡೆಸಿದ್ದಾರೆ.

ಸಿಂಧೂ ಜಲ ಒಪ್ಪಂದಕ್ಕೆ ಸಹಿ ಮಾಡಿದ ನಂತರದಲ್ಲಿ ಆಗಿರುವ ಬದಲಾವಣೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಯಬೇಕು ಎಂದು ಭಾರತ ಮಾಡಿದ್ದ ಮನವಿಗಳಿಗೆ ಪಾಕಿಸ್ತಾನವು ಅಡ್ಡಿ ಸೃಷ್ಟಿಸುತ್ತಿದೆ ಎಂದು ಕೂಡ ವಿದೇಶಾಂಗ ಸಚಿವಾಲಯ ಹೇಳಿದೆ.

1950 ಹಾಗೂ 1960ರ ದಶಕದ ಆರಂಭದಲ್ಲಿ ಇದ್ದ ಎಂಜಿನಿಯರಿಂಗ್ ತಂತ್ರಗಳನ್ನು ಆಧರಿಸಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಹೀಗಾಗಿ, 21ನೆಯ ಶತಮಾನಕ್ಕೆ ಈ ಒಪ್ಪಂದ ಸರಿಹೊಂದುವಂತೆ ಮಾಡಲು ಮರುಮಾತುಕತೆ ನಡೆಯುವ ಅಗತ್ಯ ಇದೆ ಎಂದು ಸಚಿವಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.