ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel–Hamas war | 9 ಮಕ್ಕಳು ಸಹಿತ 14 ಪ್ಯಾಲೆಸ್ಟೀನ್‌ ನಾಗರಿಕರ ಹತ್ಯೆ: ಸಚಿವ

Published 4 ಜನವರಿ 2024, 10:24 IST
Last Updated 4 ಜನವರಿ 2024, 10:24 IST
ಅಕ್ಷರ ಗಾತ್ರ

ಗಾಜಾ: ಗಾಜಾ ಹಾಗೂ ಇಸ್ರೇಲ್ ನಡುವಿನ ಸಂಘರ್ಷ ಮುಂದುವರಿದಿದ್ದು, 9 ಮಕ್ಕಳು ಸಹಿತ 14 ಪ್ಯಾಲೆಸ್ಟೀನಿಯನ್ನರನ್ನು ಇಸ್ರೇಲ್‌ ಹತ್ಯೆಗೈದಿದೆ ಎಂದು ಪ್ಯಾಲೆಸ್ಟೀನ್ ಸಚಿವ ಗುರುವಾರ ಹೇಳಿದ್ದಾರೆ.

‘ಪಶ್ಚಿಮ ಗಾಜಾದ ಅಲ್‌–ಮವಾಸಿ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಇವರು ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ’ ಎಂದಿದ್ದಾರೆ.

ಕಳೆದ ಡಿ. 28ರ ನಂತರ ನಡೆದ ಮತ್ತೊಂದು ದೊಡ್ಡ ದಾಳಿ ಇದಾಗಿದೆ. ಗಾಜಾದ ನಗರಗಳು, ಪಟ್ಟಣಗಳು ಮತ್ತು ನಿರಾಶ್ರಿತರ ಕೇಂದ್ರಗಳ ಮೇಲೆ ಇಸ್ರೇಲ್ ಪಡೆಗಳು ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿವೆ.

ಡಿಸೆಂಬರ್ ಕೊನೆಯ ವಾರದಲ್ಲಿ ರಾತ್ರಿಯಿಡೀ ಇಸ್ರೇಲ್ ಪಡೆಗಳು ಬಾಂಬ್‌ಗಳ ಸುರಿಮಳೆಗೈದಿದ್ದವು. ದೀರ್ ಅಲ್–ಬಲಾಹ್ ಪಟ್ಟಣದ ಬಳಿ ಐವರು ಮಕ್ಕಳು, ಏಳು ಮಹಿಳೆಯರು ಸೇರಿ 25 ಮಂದಿ ಬಲಿಯಾಗಿದ್ದಾರೆ.

ಈ ಭಾಗದಲ್ಲಿ ನೆಲೆ ಕಂಡುಕೊಂಡಿದ್ದ ಸಾವಿರಾರು ಮಂದಿ ಈಜಿಪ್ಟ್‌ ಗಡಿ ಮತ್ತು ದಕ್ಷಿಣ ಮೆಡಿಟರೇನಿಯನ್ ಕರಾವಳಿ ಪ್ರದೇಶದಲ್ಲಿರುವ ವಲಸಿಗರ ಕೇಂದ್ರಗಳತ್ತ ಗುಳೆ ಹೊರಟಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ಯುದ್ಧದಲ್ಲಿ ಪ್ಯಾಲೆಸ್ಟೀನ್‌ನ 20 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ ಉತ್ತರ ಗಾಜಾದಲ್ಲಿದ್ದ 23 ಲಕ್ಷ ಜನರ ಪೈಕಿ ಶೇ 85ರಷ್ಟು ಮಂದಿ ಇತರೆ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT