ನವದೆಹಲಿ: ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಮನು ಭಾಕರ್ ಅವರು ಬುಧವಾರ ಬೆಳಿಗ್ಗೆ ದೆಹಲಿಗೆ ಬಂದಿಳಿದಿದರು.
ಏರ್ ಇಂಡಿಯಾದ ನೇರ ವಿಮಾನದಲ್ಲಿ (ಎಐ 142) ಪ್ಯಾರಿಸ್‌ನಿಂದ ಹೊರಟ ಮನು ಭಾಕರ್, ಬುಧವಾರ ಬೆಳಿಗ್ಗೆ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರು. ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಬಂದ ವಿಮಾನವು ಬೆಳಿಗ್ಗೆ 9.20ಕ್ಕೆ ಲ್ಯಾಂಡ್ ಆಯಿತು.
ಸೋನೆ ಮಳೆಯ ನಡುವೆಯೆ ಸುಮಾರು 100 ಮಂದಿ ಅವರ ಸ್ವಾಗತಕ್ಕೆ ಏರ್‌ಪೋರ್ಟ್‌ನಲ್ಲಿ ಕಾದು ಕುಳಿತಿದ್ದರು. ಮನು ಅವರ ಪೋಷಕರಾದ ರಾಮ್ ಕಿಶನ್ ಹಾಗೂ ಸುಮೇಧಾ, ಭಾಕರ್ ಅವರ ತವರು ರಾಜ್ಯವಾದ ಉತ್ತರಾಖಂಡದ ಅಧಿಕಾರಿಗಳು, ಕ್ರೀಡಾ ಪ್ರೇಮಿಗಳು, ವೈಯಕ್ತಿಕ ಕೋಚ್ ಜಸ್ಪಾಲ್ ರಾಣಾ ಅವರು ಏರ್‌ಪೋರ್ಟ್‌ನಲ್ಲಿ ಭಾಕರ್‌ಗಾಗಿ ಕಾಯುತ್ತಿದ್ದರು.
#WATCH | Double Olympic medalist Manu Bhaker shows her medal as she arrives in Delhi after her historic performance in #ParisOlympics2024
— ANI (@ANI) August 7, 2024
She won bronze medals in Women’s 10m Air Pistol & the 10m Air Pistol Mixed team event. pic.twitter.com/5dylr6Zimv
ಹಾಡು, ನೃತ್ಯ, ತಮಟೆ ಬಾರಿಸುವ ಮೂಲಕ ಭಾಕರ್ ಆಗಮನವನ್ನು ಏರ್‌ಪೋರ್ಟ್‌ನಲ್ಲಿ ಜನ ಸಂಭ್ರಮಿಸಿದರು. ಭಾಕರ್ ಹಾಗೂ ರಾಣಾ ಅವರ ಚಿತ್ರಗಳಿದ್ದ ಪೋಸ್ಟರ್, ಬ್ಯಾನರ್ ಹಿಡಿದು ಸ್ವಾಗತ ಕೋರಿದರು.
ಶನಿವಾರ ಮತ್ತೆ ಪ್ಯಾರಿಸ್‌ಗೆ ತೆರಳಲಿರುವ ಭಾಕರ್, ಭಾನುವಾರ ನಡೆಯಲಿರುವ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಭಾರತದ ಮಹಿಳಾ ಧ್ವಜಧಾರಿಯಾಗಿ ಪಾಲ್ಗೊಳ್ಳಲಿದ್ದಾರೆ.
22 ವರ್ಷದ ಭಾಕರ್, ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಹಾಗೂ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.