ಪಟ್ನ: ಆರು ವರ್ಷದ ಮಗನನ್ನು ನೆಲಕ್ಕೆ ಗುದ್ದಿ ತಂದೆಯೇ ಕೊಲೆ ಮಾಡಿರುವ ಘಟನೆಯು ಪಟ್ನದ ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್ನಲ್ಲಿ ಭಾನುವಾರ ಜರುಗಿದೆ.

ಪ್ರಭಾಕರ್ ಮಹೋತೋ ಎನ್ನುವ ವ್ಯಕ್ತಿಯು ತನ್ನ ಮಗ ಸನ್ನಿ(6)ಯನ್ನು ಕೊಲೆ ಮಾಡಿ, ತಲೆಮರೆಸಿಕೊಂಡಿದ್ದಾನೆ.

ಭಾನುವಾರ ಮುಂಜಾನೆ ಹೋಟೆಲ್ನ ಕೊಠಡಿಯಲ್ಲಿ ತಂದೆಯು ಮಗನಿಗೆ ತಳಿಸುತ್ತಿರುವ ಮಾಹಿತಿ ಮೇರೆಗೆ ಆಗಮಿಸಿದ ಪೊಲೀಸರು, ತಕ್ಷಣವೇ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶನಿವಾರ ರಾತ್ರಿ ಹೋಟೆಲ್ನ ಕೊಠಡಿಯಲ್ಲಿ ಗಂಡ ಹಾಗೂ ಹೆಂಡತಿಯ ನಡುವೆ ಜಗಳವಾಗಿದ್ದು, ಬಳಿಕ ಮಗುವಿನ ಮೇಲೆ ತಂದೆಯು ಹಲ್ಲೆ ಮಾಡಿದ್ದಾನೆ.

ಘಟನೆಯ ನಂತರ ಆರೋಪಿಯು ನಾಪತ್ತೆಯಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಟ್ನಕ್ಕೆ ಭೇಟಿ ನೀಡಿದ್ದ ದಂಪತಿ, ಮಗುವಿನ ಜೊತೆಗೆ ಹೋಟೆಲ್ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಘಟನೆ ಜರುಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.