ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ, ಮೇಘಾಲಯ, ತ್ರಿಪುರಾ ‘ರಾಜ್ಯ ಸ್ಥಾಪನಾ ದಿನ’: ಮೋದಿ ಶುಭಾಶಯ

Published 21 ಜನವರಿ 2024, 4:55 IST
Last Updated 21 ಜನವರಿ 2024, 4:55 IST
ಅಕ್ಷರ ಗಾತ್ರ

ನವದೆಹಲಿ: ಮೇಘಾಲಯ, ಮಣಿಪುರ ಹಾಗೂ ತ್ರಿಪುರಾ ‘ರಾಜ್ಯ ಸ್ಥಾಪನಾ ದಿನ’ದ ಅಂಗವಾಗಿ ಮೂರು ರಾಜ್ಯಗಳ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.

ಈಶಾನ್ಯ ಪ್ರದೇಶ ಕಾಯ್ದೆ–1971ರ ಅಡಿಯಲ್ಲಿ ಈ ಮೂರೂ ರಾಜ್ಯಗಳು 1972ರ ಜನವರಿ 21 ರಂದು ರಚನೆಯಾಗಿದ್ದವು.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಮಣಿಪುರದ ರಾಜ್ಯ ಸ್ಥಾಪನೆಯ ಈ ದಿನದಂದು, ರಾಜ್ಯದ ಜನರಿಗೆ ನನ್ನ ಶುಭಾಶಯಗಳು. ಭಾರತದ ಪ್ರಗತಿಗೆ ಮಣಿಪುರ ಬಲವಾದ ಕೊಡುಗೆ ನೀಡಿದೆ. ಈ ರಾಜ್ಯದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ. ಮಣಿಪುರದ ನಿರಂತರ ಅಭಿವೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಅವರು ಹೇಳಿದ್ದಾರೆ. 

ತ್ರಿಪುರಾದ ಜನರಿಗೆ ಶುಭಾಶಯಗಳು, ಈ ನಾಡಿನ ಜನರಿಗೆ ಸಮೃದ್ಧಿ ಮತ್ತು ಸಾಮರಸ್ಯವನ್ನು ಬಯಸುತ್ತೇನೆ ಎಂದು ಮೋದಿ ಅವರು ಹೇಳಿದರು.

ಮತ್ತೊಂದು ಪೋಸ್ಟ್‌ನಲ್ಲಿ ಮೇಘಾಲಯದ ಜನರಿಗೆ ರಾಜ್ಯ ಸ್ಥಾಪನಾ ದಿನದ ಶುಭಾಶಯಗಳು! ಈ ನಾಡಿನ ಜನರ ಸಾಧನೆಗಳು ದೇಶದ ಪ್ರಗತಿಗೆ ಪ್ರಮುಖ ಕೊಡುಗೆಗಳಾಗಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT