ನವದೆಹಲಿ: ಹೊಸ ಸಂಸತ್ ಭವನದ ಕಟ್ಟಡ ಕಾಮಗಾರಿ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿರುವವರ ಜತೆ ಮಾತುಕತೆ ನಡೆಸಿದ ಪ್ರಧಾನಿ, ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.

ನೋಡಿ –Photos - ಹೊಸ ಸಂಸತ್ ಕಟ್ಟಡ ಕಾಮಗಾರಿ ಪರಿಶೀಲಿಸಿದ ಪ್ರಧಾನಿ ಮೋದಿ

‘ಸೆಂಟ್ರಲ್ ವಿಸ್ತಾ’ ಯೋಜನೆಯಡಿ ನೂತನ ಸಂಸತ್ ಕಟ್ಟಡ ನಿರ್ಮಾಣವಾಗುತ್ತಿದೆ. ಮುಂದಿನ ವರ್ಷಾಂತ್ಯದ ವೇಳೆಗೆ ಸಂಸತ್ ಭವನ ನಿರ್ಮಾಣವಾಗುವ ನಿರೀಕ್ಷೆ ಇದೆ. 2022ರ ಚಳಿಗಾಲದ ಅಧಿವೇಶನ ಹೊಸ ಸಂಸತ್ ಭವನದಲ್ಲೇ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

64,500 ಚದರ ಮೀಟರ್ ಪ್ರದೇಶದಲ್ಲಿ ಹೊಸ ಸಂಸತ್ ನಿರ್ಮಾಣವಾಗುತ್ತಿದೆ.

ಭಾರತದ ಪ್ರಜಾಪ್ರಭುತ್ವ ಪರಂಪರೆಯ ಕುರಿತ ಪ್ರದರ್ಶನಕ್ಕಾಗಿ ಭವ್ಯವಾದ ‘ಸಂವಿಧಾನ ಸಭಾಂಗಣ’, ಸಂಸತ್ತಿನ ಸದಸ್ಯರಿಗಾಗಿ ವಿಶ್ರಾಂತಿ ಕೋಣೆ, ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು, ಊಟದ ಪ್ರದೇಶಗಳು ಮತ್ತು ವಾಹನ ನಿಲುಗಡೆಗೆ ಸಾಕಷ್ಟು ಸ್ಥಳವನ್ನು ಸಂಸತ್ ಭವನ ಹೊಂದಿರಲಿದೆ.

ಓದಿ:ಆಳ-ಅಗಲ: ಪ್ರಜಾಪ್ರಭುತ್ವಕ್ಕೆ ಹೊಸ ಮಂಟಪ; ನೂತನ ಸಂಸತ್ ಭವನ

ನೂತನ ಸಂಸತ್ ಭವನವು ಶೇ 100ರಷ್ಟು ಕಾಗದ ರಹಿತ ಕಟ್ಟಡವಾಗಿರಲಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ. ಸಂಸದರಿಗೆ, ಕಚೇರಿ ಸಿಬ್ಬಂದಿಗೆ ಅತ್ಯಾಧುನಿಕ ಸವಲತ್ತುಗಳನ್ನು ನೀಡಲಾಗುತ್ತದೆ. ದಾಖಲೆ ಪತ್ರಗಳೆಲ್ಲವನ್ನೂ ವಿದ್ಯುನ್ಮಾನ ರೂಪದಲ್ಲಿ ನಿರ್ವಹಣೆ ಮಾಡಲಾಗುತ್ತದೆ.ಪ್ರತಿ ಸಂಸದರ ಖುರ್ಚಿಯಲ್ಲೂ ಸ್ಮಾರ್ಟ್ ಪರದೆಯ ವ್ಯವಸ್ಥೆ ಇರಲಿದೆ. ಕಲಾಪಗಳ ಎಲ್ಲಾ ದಾಖಲೆಗಳನ್ನು ಡಿಜಿಟಲ್ ರೂಪದಲ್ಲೇ ನಿರ್ವಹಣೆ ಮಾಡಲಾಗುತ್ತದೆ. ಸಂಸತ್ ಭವನದಲ್ಲಿ ಪ್ರತಿ ಸಂಸದರಿಗೂ ಪ್ರತ್ಯೇಕ ಕಚೇರಿ ಇರಲಿದೆ. ಪ್ರತಿ ಕಚೇರಿಯಲ್ಲೂ ಡಿಜಿಟಲ್ ಇಂಟರ್ಫೇಸ್ ಇರಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.