ನವದೆಹಲಿ: ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ʼಅಭಿವೃದ್ಧಿ ವಾಹನವು ಹಿಮ್ಮುಖವಾಗಿ ಚಲಿಸುತ್ತಿದೆʼ ಎಂದು ವ್ಯಂಗ್ಯವಾಡಿದ್ದಾರೆ.

ಮೋದಿ ಆಡಳಿತದಲ್ಲಿ ದೇಶ ಅಭಿವೃದ್ಧಿ ಮಾತುಗಳಿಂದ ತುಂಬಾ ದೂರ ಉಳಿದಿದ್ದು, ಲಕ್ಷಾಂತರ ಕುಟುಂಬಗಳು ಒತ್ತಾಯಪೂರ್ವಕವಾಗಿ ಸೌದೆ ಒಲೆಗಳನ್ನು ಹಚ್ಚುವಂತೆ ಮಾಡಿದೆ. ಮೋದಿ ಜೀ ಅವರ ಅಭಿವೃದ್ಧಿ ವಾಹನವು ಹಿಮ್ಮುಖವಾಗಿ ಚಲಿಸುತ್ತಿದೆ ಮತ್ತು ಬ್ರೇಕ್ ಸಹ ತುಂಡಾಗಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ʼಬೆಲೆ ಏರಿಕೆಯ ಪರಿಣಾಮವಾಗಿ ಗ್ರಾಮೀಣ ಭಾಗದ ಶೇ.42ರಷ್ಟು ಜನರು ಎಲ್‌ಪಿಜಿ ಸಿಲಿಂಡರ್ ಖರೀದಿಸಲಾರದೆ ಅದನ್ನು ಬಳಸುವುದನ್ನೇ ನಿಲ್ಲಿಸಿದ್ದಾರೆ. ಹಾಗೆಯೇ ಅಡುಗೆ ಮಾಡಲು ಸೌದೆ ಒಲೆ ಬಳಸಲಾರಂಭಿಸಿದ್ದಾರೆʼ ಎಂಬ ಸಮೀಕ್ಷೆಯೊಂದರ ಮಾಹಿತಿ ಆಧರಿಸಿಪ್ರಕಟವಾಗಿರುವ ವರದಿಯೊಂದರ ಚಿತ್ರವನ್ನೂ ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಪೆಟ್ರೋಲಿಯಂ ಕಂಪೆನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಬೆಲೆಯನ್ನುಅಕ್ಟೋಬರ್ 6ರಂದು ₹15 ಹೆಚ್ಚಿಸಿದ್ದವು.ಅದೇರೀತಿ ನವೆಂಬರ್1ರಂದು ವಾಣಿಜ್ಯ ಬಳಕೆಯಸಿಲಿಂಡರ್ ಬೆಲೆಯನ್ನು ₹ 266 ಏರಿಕೆ ಮಾಡಲಾಗಿತ್ತು.

ಬೆಲೆ ಏರಿಕೆಯಿಂದಾಗಿ ಸಬ್ಸಿಡಿ ರಹಿತ14.2 ಕೆಜಿ ತೂಕದಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ₹ 899.50 ಆಗಿದೆ. ಇದೇ ವೇಳೆ5 ಕೆಜಿ ಸಿಲಿಂಡರ್ ಬೆಲೆ ₹502ಕ್ಕೆ ತಲುಪಿದೆ.19ಕೆ.ಜಿ.ಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ ಬರೋಬ್ಬರಿ ₹ 2,000.50ಕ್ಕೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.