ರಾಂಚಿ: ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಜಾರ್ಖಂಡ್ನ ದೇವಘರ್ ವಿಮಾನ ನಿಲ್ದಾಣದಲ್ಲಿ ಅವರು ಒಂದು ಗಂಟೆಗೂ ಹೆಚ್ಚು ಕಾಯಬೇಕಾಯಿತು.

ದೇವಘರ್ನಿಂದ 80 ಕಿ.ಮೀ ದೂರದಲ್ಲಿರುವ ಬಿಹಾರದ ಜಮುಯಿ ಎಂಬಲ್ಲಿ ಬಿರ್ಸಾ ಮುಂಡಾ ಅವರ 150ನೇ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಿದ್ದರು.

ಇದಾದ ಬಳಿಕ ವಾಯುಪಡೆ ವಿಮಾನದ ಮೂಲಕ ಮೋದಿ ಅವರು ದೆಹಲಿಗೆ ಹಿಂದಿರುಗಬೇಕಿತ್ತು. ಆದರೆ ವಿಮಾನದಲ್ಲಿ ದೋಷ ಕಾಣಿಸಿಕೊಂಡು ಸಮಸ್ಯೆ ಎದುರಾಯಿತು. ಮೋದಿ ಅವರು ನಿಲ್ದಾಣದಲ್ಲಿದ್ದ ವೇಳೆ ಭದ್ರತಾ ಕಾರಣದಿಂದ ಸ್ಥಳದಲ್ಲಿ ‘ಹಾರಾಟ ನಿಷೇಧ’ವನ್ನು (ನೋ ಫ್ಲೈಯಿಂಗ್ ಝೋನ್) ಘೋಷಿಸಲಾಗಿತ್ತು.

ಬಳಿಕ ಪರ್ಯಾಯ ವ್ಯವಸ್ಥೆಯ ಮೂಲಕ ಮೋದಿ ದೆಹಲಿ ತಲುಪಿದರು.
.ಎಂ.ಎಸ್. ಸ್ವಾಮಿನಾಥನ್ ಕೊಡುಗೆ ಅಚ್ಚಳಿಯದೆ ಉಳಿಯಲಿದೆ: ಪ್ರಧಾನಿ ಮೋದಿ.ಸಾಮಾಜಿಕ ನ್ಯಾಯದ ಜನನಾಯಕ ಕರ್ಪೂರಿ ಠಾಕೂರ್ 100ನೇ ಜನ್ಮದಿನ: ಭಾರತ ರತ್ನದ ಗೌರವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.