ನವದೆಹಲಿ: ಹರಿಯಾಣದ ಹಿಂಸಾಚಾರ ಪೀಡಿತ ಗುರುಗ್ರಾಮ, ನೂಹ್ ಪ್ರದೇಶಗಳಿಗೆ ಭೇಟಿ ನೀಡಲು ಮುಂದಾದ ನಾಲ್ವರು ಸಿಪಿಐ ಸದಸ್ಯರ ನಿಯೋಗವನ್ನು ಪೊಲೀಸರು ತಡೆದಿದ್ದಾರೆ.
ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿ ಹಾಗೂ ಭದ್ರತಾ ನಿಯಮಗಳನ್ನು ಉಲ್ಲೇಖಿಸಿ ಪೊಲೀಸರು ಸಿಪಿಐ ಸದಸ್ಯರನ್ನು ತಡೆದಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಸಿಪಿಐ ಸದಸ್ಯರ ನಿಯೋಗವು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸಿಪಿಐ ರಾಜ್ಯಸಭಾ ಸಂಸದ ಬಿನೋಯ್ ವಿಶ್ವಂ, ಸಂಸದ ಸಂತೋಷ್ ಕುಮಾರ್, ಸಿಪಿಐ ಪ್ರಧಾನ ಕಾರ್ಯದರ್ಶಿ ಅಮರಜೀತ್ ಕೌರ್, ಪಕ್ಷದ ನಾಯಕ ದರಿಯಾವ್ ಸಿಂಗ್ ಕಶ್ಯಪ್ ಸೇರಿದಂತೆ ನಾಲ್ವರು ಸದಸ್ಯರ ನಿಯೋಗ ಹಿಂಸಾಚಾರ ಪೀಡಿತ ಗುರುಗ್ರಾಮ, ನೂಹ್ ಜಿಲ್ಲೆಗಳಿಗೆ ಭೇಟಿ ನೀಡಿತ್ತು.
ನೂಹ್ ಪಟ್ಟಣದಲ್ಲಿ ಜುಲೈ 31 (ಸೋಮವಾರ) ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಉದ್ರಿಕ್ತರು ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದರು.
ಕೋಮು ಗಲಭೆಯಿಂದ ಹರಿಯಾಣದಲ್ಲಿ ಗೃಹ ರಕ್ಷಕ ದಳದ ಇಬ್ಬರು ಮತ್ತು ನಾಲ್ವರು ನಾಗರಿಕರು ಸೇರಿ ಒಟ್ಟು ಆರು ಮಂದಿ ಮೃತಪಟ್ಟಿದ್ದರು.
ಹಿಂಸಾಚಾರದ ಹಿನ್ನೆಲೆಯಲ್ಲಿ ನೂಹ್ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಇಂಟರ್‌ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.
ಓದಿ...
ಸಿ.ಎಂ. ಸ್ಟಾಲಿನ್‌ಗೆ ಹಿಂದಿ, ಇಂಗ್ಲಿಷ್ ಮಾತನಾಡಲು ಬರುವುದಿಲ್ಲ: ಅಣ್ಣಾಮಲೈ ಲೇವಡಿ
ಮುಂಬೈ: ಕುಡಿದ ಮತ್ತಿನಲ್ಲಿ ಸರಣಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಕರೆ, ಆರೋಪಿ ಬಂಧನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.