ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಶೆ ಕಾರು ಅಪಘಾತ: ಆರೋಪಿಗೆ ಪಿಜ್ಜಾ, ಬರ್ಗರ್‌: ಮೃತರ ಬಗ್ಗೆ ತನಿಖೆ– ಅಂಬೇಡ್ಕರ್

Published 22 ಮೇ 2024, 11:02 IST
Last Updated 22 ಮೇ 2024, 11:02 IST
ಅಕ್ಷರ ಗಾತ್ರ

ಪುಣೆ: ಮದ್ಯದ ಅಮಲಿನಲ್ಲಿ ದುಬಾರಿ ಪೋಶೆ ಕಾರು ಅಪಘಾತ ಮಾಡಿ ಇಬ್ಬರ ಸಾವಿಗೆ ಕಾರಣವಾಗಿರುವ ಶ್ರೀಮಂತ ಕುಟುಂಬದ ಬಾಲಕನಿಗೆ ಪಿಜ್ಜಾ, ಬರ್ಗರ್‌ ತರಿಸಿಕೊಟ್ಟು ಔದಾರ್ಯ ಮೆರೆದ ಯರೇವಾಡ ಠಾಣೆಯ ಅಧಿಕಾರಿ, ಮೃತಪಟ್ಟ ಅನೀಶ್ ಮತ್ತು ಅಶ್ವಿನಿ ನಡುವಿನ ಸಂಬಂಧದ ಕುರಿತು ಸಾಲು ಸಾಲು ಪ್ರಶ್ನೆಗಳನ್ನು ಕೇಳಿ ಅಮೂಲ್ಯ ಸಮಯ ಕಳೆದಿದ್ದಾರೆ ಎಂದು ವಕೀಲ ಹಾಗೂ ವಂಚಿತ್ ಬಹುಜನ ಅಘಾಡಿ ಪಕ್ಷದ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್‌ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡ ಅವರು, ಒಂದು ವ್ಯವಸ್ಥೆ ಬಡವರಿಗೆ ಮತ್ತು ಶ್ರೀಮಂತರಿಗೆ ಹೇಗೆ ಭಿನ್ನವಾಗಿರುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಹೇಳಿದ್ದಾರೆ.

ಕ್ಲಬ್‌ನಲ್ಲಿ ಅಪ್ರಾಪ್ತನಿಗೆ ಆಲ್ಕೋಹಾಲ್‌ ನೀಡಿದ್ದಾದರೂ ಹೇಗೆ?, ನೋಂದಣಿ ಸಂಖ್ಯೆ ಇಲ್ಲದೆ ಶೋರೂಂ ಕಾರನ್ನು ರಸ್ತೆಗಿಳಿಸಿದ್ದು ಹೇಗೆ?, ಟ್ರಾಫಿಕ್‌ ಪೊಲೀಸರ ಕಣ್ಣಿಗೆ ಕಾರು ಏಕೆ ಕಾಣಲಿಲ್ಲ?, ರಕ್ತದಲ್ಲಿನ ಮದ್ಯದ ಪ್ರಮಾಣ ತಿಳಿಯಲು ನಡೆಸುವ ಆಲ್ಕೋಹಾಲ್‌ ತಪಾಸಣೆಯನ್ನು ಘಟನೆ ನಡೆದ 8 ಗಂಟೆಗಳ ಬಳಿಕ ನಡೆಸಿದ್ದು ಏಕೆ?, ಆರೋಪಿ ಬಾಲಕನನ್ನು ಬಾಲನ್ಯಾಯಕ್ಕೆ ಯಾಕೆ ಕಳುಹಿಸಲಿಲ್ಲ ಮತ್ತು ಜಾಮೀನು ಹೇಗೆ ಸಿಕ್ಕಿತು?, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಉಪ ಮುಖ್ಯಮಂತ್ರಿ ಪುಣೆಗೆ ಬಂದಿದ್ದಾರಾ ಅಥವಾ ಬಿಲ್ಡರ್‌ನ ಮಗನನ್ನು ಬಚಾವು ಮಾಡಲು ಬಂದಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

‘ಪ್ರಕರಣದ ತನಿಖೆಗೆ ಇದು ಸರಿಯಾದ ಕ್ರಮ ಎಂದು ಅಧಿಕಾರಿಗಳು ಭಾವಿಸಿಲ್ಲ, ಬದಲಾಗಿ ಘಟನೆಯ ಬಗ್ಗೆ ಎಲ್ಲೆಡೆ ಸುದ್ದಿಯಾದ ಮೇಲೆ ಕಾರ್ಯಪೃವತ್ತರಾಗಿದ್ದಾರೆ’.

‘ಅಂತಿಮವಾಗಿ ಪೊಲೀಸರು ಕೈಗೊಂಡ ಕ್ರಮಕ್ಕೆ ಯಾರಾದರೂ ಧನ್ಯವಾದ ಹೇಳಬೇಕೆಂದಿದ್ದರೆ ಅದನ್ನು ಪುಣೆಯ ನಾಗರಿಕರಿಗೆ ಹೇಳಿ. ನಾವು ಕೂಡ ಪೋಷಕರು, ಮಕ್ಕಳನ್ನು ಕಳೆದುಕೊಂಡ ನೋವು ಬೇರೆಯಾವುದಕ್ಕಿಂತಲೂ ದೊಡ್ಡದಲ್ಲ. ಆ ಪೋಷಕರ ಸ್ಥಿತಿ ಕುರಿತು ನಮಗೂ ನೋವಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT